ಪಾಕಿಸ್ತಾನ ಹೈಕಮಿಷನರ್ ಕಚೇರಿ ಕಚೇರಿಯೋ, ಗೂಢಚಾರಿಗಳ ನೆಲೆಯೋ… ?

ಈ ಸುದ್ದಿಯನ್ನು ಶೇರ್ ಮಾಡಿ

pak

ನವದೆಹಲಿ, ನ.2-ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿಯು ಪಾಕ್ ಗೂಢಚಾರ ಕಚೇರಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಇದೇ ವೇಳೆ ವಿವಿಧೆಡೆ ಪಾಕಿಸ್ತಾನ ಗೂಢಚಾರ ಸಂಸ್ಥೆ-ಇಂಟರ್ ಸರ್ವಿಸ್ ಇಂಟೆಲಿಜೆನ್ಸ್‍ನ (ಐಎಸ್‍ಐ) 16 ಬೇಹುಗಾರರು ಹಲವು ತಿಂಗಳಿನಿಂದ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಅಕಾರಿಯೊಬ್ಬರೂ ಈ ಜಲದಲ್ಲಿದ್ದಾರೆ ಎಂಬ ಸೋಟಕ ಮಾಹಿತಿ ಬಗ್ಗೆಯೂ ಸಹ ವಿಚಾರಣೆ ಮುಂದುವರೆದಿದೆ.

ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಈಗಾಗಲೇ ನಿಯೋಜಿವಾಗಿರುವ ಪಾಕಿಸ್ತಾನದ ಈ ಏಜೆಂಟರು ರಕ್ಷಣಾ ಇಲಾಖೆಗೆ ಸಂಬಂಸಿದ ಮಹತ್ವದ ಸುಳಿವುಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿರುವ ಜೊತೆಗೆ 2008ರ ಮುಂಬೈ ಮಾದರಿ ದಾಳಿಗೆ ವ್ಯವಸ್ಥಿತ ಸಂಚು ರೂಪಿಸಿದ್ದ ಸಂಗತಿಯೂ ಬಯಲಾಗಿದೆ. ಗೂಢಚರ್ಯೆ ಆರೋಪದಲ್ಲಿ ಬಂತನಾಗಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿ ಅಕಾರಿ ಮೆಹಮೂದ್ ಅಖ್ತರ್ ಭಾರತ ಬಿಡುವ ಮುನ್ನ ದೆಹಲಿಯಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಐಎಸ್‍ಐನ 16 ಮಂದಿ ಅಕಾರಿ ಮತ್ತು ಸಿಬ್ಬಂದಿ ಹೆಸರನ್ನು ಬಹಿರಂಗಗೊಳಿಸಿದ್ದಾನೆ.

ಕರ್ನಲ್ ಸಯ್ಯದ್ ಫಾರೂಖ್, ಆತನ ಸಹಾಯಕ ಅಕಾರಿ ಖದೀಮ್ ಹುಸೇನ್, ಮೇಜರ್ ಸಹೀದ್ ಇಕ್ಬಾಲ್ ಮತ್ತು ಉಪ ನಿರ್ದೇಶಕ ಡಾ. ಮುದಾಸಿರ್ ಇಕ್ಬಾಲ್ ಮೊದಲಾದ ಐಎಸ್‍ಐ ಸದಸ್ಯರ ಹೆಸರು ಮತ್ತು ಅವರ ಮಾಹಿತಿಗಳನ್ನು ಅಖ್ತರ್ ನೀಡಿದ್ದು, ಬೇಹುಗಾರಿಕೆ ಜಲ
ಭೇದಿಸುವ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ.

ಈ ವ್ಯಕ್ತಿಗಳು ಹಲವು ತಿಂಗಳುಗಳಿಂದ ಐಎಸ್‍ಐ ಮತ್ತು ಪಾಕಿಸ್ತಾನಿ ಸೇನೆ ಎರಡಕ್ಕೂ ಕಾರ್ಯನಿರ್ವಹಿಸುತ್ತಾ ಭಾರತದ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗೆ ಸೇರಿದ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದಾರೆ. ಅವರ ಗೂಢಚರ್ಯೆ ಕಾರ್ಯಗಳು ಸಂದರ್ಭಕ್ಕೆ ಅನುಗುಣವಾಗಿ ಅಗಾಗ ಬದಲಾವಣೆಯಾಗುತ್ತಿರುತ್ತವೆ ಎಂಬ ಸೋಟಕ ಮಾಹಿತಿಯನ್ನೂ ಅತ ಬಾಯ್ಬಿಟ್ಟಿದ್ದಾನೆ. ಅಖ್ತರ್ ಐಎಸ್‍ಐಗಾಗಿ ಅತ್ಯಂತ ವ್ಯವಸ್ಥಿತ ಬೇಹುಗಾರಿಕೆ ಜಲವೊಂದನ್ನು ನಡೆಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಭಾರತ-ಪಾಕ್ ಗಡಿಯಲ್ಲಿ ಬಿಎಸ್‍ಎಫ್ ಯೋಧರ ನಿಯೋಜನೆಗೆ ಸಂಬಂಸಿದಂತೆ ದಾಖಲೆಗಳು ಸೇರಿದಂತೆ ಹಲವು ಗೋಪ್ಯ ಮಾಹಿತಿಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ.

 ಇಸ್ರೋ ಅಕಾರಿ ಷಾಮೀಲು :

ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಅಕಾರಿಯೊಬ್ಬರ ಮೂಲಕ ಆಖ್ತರ್ ಅತ್ಯಂತ ಸೂಕ್ಷ್ಮ ಮಾಹಿತಿ ಕಲೆ ಹಾಕಿ ಪಾಕ್‍ಗೆ ರವಾನಿಸುತ್ತಿದ್ದ ಎಂಬ ಆತಂಕಕಾರಿ ಸಂಗತಿಯೂ ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಅಕಾರಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ತನಿಖೆಗೆ ಒಳಪಡಿಸಲಾಗಿದೆ.

20 ವರ್ಷಗಳಿಂದ ಮಾಹಿತಿ ರವಾನೆ :

ಸಂಸತ್ತಿಗೆ ಸಂಬಂಸಿದ ದಾಖಲೆಗಳನ್ನು ಕದ್ದು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಬಂತನಾಗಿರುವ ಸಮಾಜವಾದಿ ಪಕ್ಷದ ಸಂಸದ ಮುನ್ನಾವರ್ ಸಲೀಂ ಆಪ್ತ ಕಾರ್ಯದರ್ಶಿ ಫರಾತ್ ಕಳೆದ 20 ವರ್ಷಗಳಿಂದಲೂ ಬೇಹುಗಾರಿಕೆ ನಡೆಸುತ್ತಿದ್ದ ಸಂಗತಿ ವಿಚಾರಣೆ ವೇಳೆ ತಿಳಿದುಬಂದಿದೆ.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin