ಪಾಕಿಸ್ಥಾನದ ಕ್ರಿಕೆಟ್ ದಂತಕತೆ ಮಹಮದ್ ಹನೀಫ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

mahamad

ಕರಾಚಿ,ಆ.11-ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪಾಕಿಸ್ಥಾನದ ಕ್ರಿಕೆಟ್ ದಂತಕತೆ ಮಹಮದ್ ಹನೀಫ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಕರಾಚಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ವಿಷಯ ಪಾಕಿಸ್ಥಾನದ ಮಾಧ್ಯಮಗಳ ಮೂಲಕ ತಿಳಿದುಬಂದಿದೆ .ಮಹಮದ್ ಹನೀಫ್ (81) ಕಳೆದ ಎರಡು ವಾರಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.ಸತತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಾದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇಂದು ಬೆಳಗ್ಗೆ ಹನೀಫ್ ಸಾವನ್ನಪ್ಪಿರುವ ವಿಷಯ ವೈದ್ಯರು ಬಹಿರಂಗ ಪಡಿಸಿದ್ದಾರೆ.
1952-53 ರಿಂದ 1969-70 ರವರೆಗೂ ಪಾಕಿಸ್ಥಾನವನ್ನು ಪ್ರತಿನಿಧಿಸಿದ್ದ ಅವರು ಒಟ್ಟು 55 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 12 ಶತಕಗಳು ಸೇರಿದಂತೆ 43.98 ಸರಾಸರಿಯಲ್ಲಿ ಟೆಸ್ಟ್ನಲ್ಲಿ ರನ್ ಗಳಿಸಿದ್ದಾರೆ 1967 ರಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ 337 ರನ್ ಗಳಿಸಿ ಹೊಸ ದಾಖಲೆಯನ್ನು ಮಾಡಿದ್ದರು . ಆ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡರು ಸಹ ಎಲ್ಲರ ನೆನಪಿನಲ್ಲಿ ಉಳಿಯುವಂತಹ ಬ್ಯಾಟಿಂಗ್ ಪ್ರದರ್ಶನ ಮಾಡಿ ಯುವ ಪ್ರತಿಭೆಗಳಿಗೆ ಮಾದರಿಯಾಗಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin