ಪಾಕ್‍ನಲ್ಲಿ ಭಯೋತ್ಪಾದನೆ ದಮನಕ್ಕೆ ಮಿತ್ರರಾಷ್ಟ್ರಗಳಿಗೆ ಅಮೆರಿಕ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ

Trump--02

ಬ್ರುಸ್ಸೆಲ್ಸ್/ವಾಷಿಂಗ್ಟನ್, ನ.10-ಪಾಕಿಸ್ತಾನವು ಭಯೋತ್ಪಾದಕರ ಸುರಕ್ಷಿತ ಸ್ವರ್ಗ ಆಗದಿರುವಂತೆ ದೃಢಪಡಿಸಿಕೊಳ್ಳಲು ಅಮೆರಿಕ ಬಯಸುತ್ತದೆ ಎಂದು ಹೇಳಿರುವ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್, ಉಗ್ರರನ್ನು ದಮನ ಮಾಡಲು ಇಸ್ಲಾಮಾಬಾದ್‍ಗೆ ಎಲ್ಲ ರೀತಿಯಲ್ಲಿಯೂ ಸಾಧ್ಯವಾಗುವಂತೆ ಭಾರತ ಮತ್ತು ಎಲ್ಲ ನ್ಯಾಟೋ ಸದಸ್ಯ ರಾಷ್ಟ್ರಗಳ ಜೊತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದೆ.

ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್‍ನ ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಷೇಷನ್) ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಕ್ಷಿಣ ಏಷ್ಯಾ ಕುರಿತ ಹೊಸ ಕಾರ್ಯತಂತ್ರದಲ್ಲಿ ಈ ಅಂಶವೂ ಒಳಗೊಂಡಿದೆ ಎಂದು ಹೇಳಿದರು.  ಪಾಕಿಸ್ತಾನ ಉಗ್ರರ ಸ್ವರ್ಗವಾಗುವುದನ್ನು ನಾವು ತಪ್ಪಿಸಬೇಕಿದೆ. ಇದಕ್ಕಾಗಿ ನಾವು ಭಾರತ ಮತ್ತು ಏಷ್ಯಾ ಪ್ರಾಂತ್ಯದ ದೇಶಗಳು ಈ ನಿಟ್ಟಿನಲ್ಲಿ ಕೈಜೋಡಿಸುವಂತೆ ಮಾಡಬೇಕಿದೆ. ಯಾವುದೇ ಭಾಗದಲ್ಲೂ ಭಯೋತ್ಪಾದನೆ ಸಂಘಟನೆ ತಲೆ ಎತ್ತದಂತೆ ಮಾಡಲು ಎಲ್ಲ ಮಿತ್ರ ರಾಷ್ಟ್ರಗಳು ಕೈಜೋಡಿಸಬೇಕಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು.

Facebook Comments

Sri Raghav

Admin