ಪಾಕ್‍ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ : ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Firing--0141

ಜಮ್ಮು, ನ.17-ಕಾಶ್ಮೀರ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಯೋಧರು ಮತ್ತೆ ಪುಂಡಾಟ ಆರಂಭಿಸಿದ್ದಾರೆ. ಜಮ್ಮು ಮತ್ತು ಪೂಂಚ್ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‍ಒಸಿ) ಪಾಕಿಸ್ತಾನ ಸೇನಾಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತದ ಕೆಲವು ಸೈನಿಕರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ನಮ್ಮ ಸಿಪಾಯಿಗಳು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸತತ ಮೂರು ದಿನಗಳಿಂದ ಯುದ್ಧ ವಿರಾಮ ಉಲ್ಲಂಘಿಸುತ್ತಾ ಉದ್ಧಟತನ ತೋರುತ್ತಿದೆ.

ಪಾಕಿಸ್ತಾನ ಸೇನೆ ಬೆಳಗ್ಗೆ 7.45ರಿಂದ ಪೂಂಚ್ ವಲಯದ ಎಲ್‍ಒಸಿ ಉದ್ದಕ್ಕೂ ಅಪ್ರಚೋದಿತವಾಗಿ ಸಣ್ಣ ಮತ್ತು ಸ್ವಯಂಚಾಲಿತ ಅಸ್ತ್ರಗಳು ಮತ್ತು ಮಾರ್ಟರ್‍ಗಳಿಂದ ನಿರಂತರ ಗುಂಡು ಹಾರಿಸಿತು. ಈ ಘಟನೆಯಲ್ಲಿ ಕೆಲವು ಯೋಧರು ಗಾಯಗೊಂಡಿದ್ದಾರೆ.  ನಿನ್ನೆ ರಾತ್ರಿಯೂ ಕೂಡ ಅಖ್ನೂರ್ ಸೆಕ್ಟರ್‍ನ ಖೌರ್ ಬೆಲ್ಟ್‍ನ ಎಲ್‍ಒಸಿಯಲ್ಲಿ ಭಾರತದ ಮುಂಚೂಣಿ ಸೇನಾ ನೆಲೆಗಳ ಮೇಲೆ ಪಾಕ್ ಯೋಧರು ಗುಂಡು ಹಾರಿಸಿದ್ದಾರೆ.  ಈ ಎರಡೂ ಅಪ್ರಚೋದಿತ ದಾಳಿಗಳಿಗೆ ಭಾರತೀಯ ಯೋಧರು ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದು, ಕೆಲಕಾಲ ಗುಂಡಿನ ಚಕಮಕಿ ನಡೆಯಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin