ಪಾಕ್‍ನಿಂದ ಮತ್ತೆ ಕಿರಿಕ್ : ಗಡಿಯಲ್ಲಿ ಭಾರತೀಯ ಸೇನೆಯಿಂದ ದಿಟ್ಟ ಉತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Firing--0011

ಜಮ್ಮು, ಜೂ.3-ಭಾರತೀಯ ಸೇನಾ ಪಡೆಗಳಿಗೆ ಒಂದೆಡೆ ಭಯೋತ್ಪಾದಕರ ಹಾವಳಿ ಇನ್ನೊಂದೆಡೆ ಪಾಕಿಸ್ತಾನಿ ಯೋಧರ ಅಪ್ರಚೋದಿತ ದಾಳಿಯ ಸವಾಲು ಎದುರಾಗಿದೆ. ಕಳೆದೊಂದು ತಿಂಗಳಿನಿಂದ ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ಮತ್ತು ಪಾಕ್ ಸೇನಾ ಪಡೆಯ ಯುದ್ಧ ವಿರಾಮ ಉಲ್ಲಂಘನೆ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತಿವೆ.   ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಸೇನಾ ಮುಂಚೂಣಿ ನೆಲೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಇಂದು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಯೋಧರೂ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.ಇಂದು ಮುಂಜಾನೆ ಪಾಕಿಸ್ತಾನಿ ಯೋಧರು ಸಣ್ಣ ಶಸ್ತ್ರಾಸ್ತ್ರಗಳು, 82 ಎಂಎಂ ಮತ್ತು 120 ಎಂಎಂ ಮಾರ್ಟರ್‍ಗಳಿಂದ ನಿರಂತರ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಹ ಪ್ರತಿದಾಳಿ ನಡೆಸಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಾನಿಷ್ ಮೆಹ್ತಾ ತಿಳಿಸಿದ್ದಾರೆ.
ಜೂನ್ 1ರಂದು ಸಹ ರಜೌರಿ ಮತ್ತು ಪೂಂಚ್ ಜಿಲ್ಲೆಗಳ ಎಲ್‍ಒಸಿ ಬಳಿ ಸೇನಾ ಮುಂಚೂಣಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸೇನಾ ಪಡೆಗಳು ಅಪ್ರಚೋದಿತ ದಾಳಿ ನಡೆಸಿದ್ದವು. ಈ ಆಕ್ರಮಣದಲ್ಲಿ ಜನರಲ್ ಎಂಜಿನಿಯರಿಂಗ್ ರಿಸರ್ವ್ ಫೋರ್ಸ್ (ಜಿಆರ್‍ಇಎಫ್) ಪಡೆಯ ಕಾರ್ಮಿಕನೊಬ್ಬ ಮೃತಪಟ್ಟು, ಚಾಲಕ ಸೇರಿದಂತೆ ಕೆಲವರು ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin