ಪಾಕ್‍ನಿಂದ ವಿಶ್ವಶಾಂತಿಗೆ ದೊಡ್ಡ ತಂದೊಡ್ಡಿದೆ ಎಂದು ವಿಶ್ವಸಂಸ್ಥೆಗೆ ಮನವರಿಕೆ ಮಾಡಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Pakistan-001

ನವದೆಹಲಿ, ಅ.12-ಪಾಕಿಸ್ತಾನದ ಮೇಲೆ ಮತ್ತೊಮ್ಮೆ ತೀಕ್ಷ್ಣ ವಾಗ್ದಾಳಿ ನಡೆಸಿರುವ ಭಾರತ, ಪಾಕಿಸ್ತಾನವು ವಿಶ್ವಶಾಂತಿಗೆ ದೊಡ್ಡ ಆತಂಕ ತಂದೊಡ್ಡಿದೆ ಎಂದು ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದೆ.  ಪಾಕಿಸ್ತಾನದ ಅಣ್ವಸ್ತ್ರಗಳ ಅನಿಯಂತ್ರಿತ ಅಭಿವೃದ್ಧಿ ಹಾಗೂ ಜಿಹಾದಿ ಸಮೂಹಗಳು ಮತ್ತು ಆ ದೇಶ ಹೊಂದಿರುವ ಅಪವಿತ್ರ ಮೈತ್ರಿಯ ನಡುವೆ ಅತ್ಯಂತ ಅಪಾಯಕಾರಿ ಸಂಬಂಧವಿದೆ. ಇದರಿಂದ ವಿಶ್ವಕ್ಕೆ ದೊಡ್ಡಮಟ್ಟದಲ್ಲಿ ಆತಂಕ ಎದುರಾಗಿದೆ ಎಂದು ಭಾರತದ ರಾಜತಾಂತ್ರಿಕ ವೆಂಕಟೇಶ್ ವರ್ಮ, ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.   ಅಣ್ವಸ್ತ್ರ ನಿಶ್ಯಸ್ತ್ರೀಕರಣ ಕುರಿತ ಸಮಾವೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ವಿನಾಕಾರಣ ಪ್ರಸ್ತಾಪ ಮಾಡಿರುವ ಪಾಕಿಸ್ತಾನ ದೂತ ತೆಹಮಿನ ಜಾನ್‍ಜೌ ಅವರಿಗೆ ತಿರುಗೇಟು ನೀಡಿರುವ ವರ್ಮ, ಭಯೋತ್ಪಾದನೆ ಕಿಯಾಶೀಲವಾಗಿ ಉತ್ತೇಜನ ನೀಡುತ್ತಿರುವ ಪಾಕಿಸ್ತಾನವು ಜಗತ್ತಿನ ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಆತಂಕ ಉಂಟು ಮಾಡಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin