ಪಾಕ್‍ನೊಂದಿಗಿನ ಸಿಂಧೂ ಜಲ ಒಪ್ಪಂದದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಪಿಐಎಲ್

ಈ ಸುದ್ದಿಯನ್ನು ಶೇರ್ ಮಾಡಿ

Sindhu-01

ನವದೆಹಲಿ, ಸೆ.26– ಕಾಶ್ಮೀರದ ಉರಿ ವಲಯದಲ್ಲಿ ನಡೆದ ಭಯೋತ್ಪಾದಕರ ದಾಳಿ ಸಂಬಂಧ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಮುಂದಾಗಿರುವಾಗಲೇ ಪಾಕ್‍ನೊಂದಿಗಿನ ಸಿಂಧೂ ಜಲ ಒಪ್ಪಂದದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಸಿಂಧುನದಿ ನೀರು ಹಂಚಿಕೆ ಒಪ್ಪಂದ ಮರುಪರಿಶೀಲನೆಯ ಸಾಧಕ-ಬಾಧಕಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಇಂದು ಮಹತ್ವದ ಚರ್ಚೆಗೆ ಸಜ್ಜಾಗಿರುವ ಸಂದರ್ಭದಲ್ಲಿಯೇ ಸರ್ವೋಚ್ಚ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಲಾಗಿದೆ.
ಅತ್ಯಂತ ಉದಾರ ಮನೋಭಾವದಿಂದ ಕೈಗೊಂಡಿರುವ ಯಶಸ್ವಿ ಒಪ್ಪಂದ ಎಂದೇ ಪ್ರಶಂಸೆಗೆ ಒಳಗಾಗಿರುವ ಸಿಂಧೂ ನದಿ ನೀರು ಹಂಚಿಕೆಗೆ ಈಗ ಕರಿ ನೆರಳು ಆವರಿಸಿದ್ದು, ಪಾಕಿಸ್ತಾನದ ಮೇಲೆ ಕರಿನೆರಳು ಆವರಿಸಿದ್ದು, ಪಾಕಿಸ್ತಾನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin