ಪಾಕ್‍ನ ಕುಖ್ಯಾತ ಭಯೋತ್ಪಾದಕ ಆಸೀಫ್ ಚೋಟು ಹಾಗೂ ಆತನ ಮೂವರು ಸಹಚರರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Asif-chotu

ಲಾಹೋರ್, ಜ.19-ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಾಗೂ ನಿಷೇಧಿತ ಲಷ್ಕರ್-ಎ-ಜಂಗ್ವಿ ಉಗ್ರಗಾಮಿ ಸಂಘಟನೆ ನಾಯಕ ಆಸೀಫ್ ಚೋಟು ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಶೇಖ್‍ಪುರ್‍ನಲ್ಲಿ ಹತ್ಯೆ ಮಾಡಿದ್ದಾರೆ. ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಬೇಕಾಗಿದ್ದ ಚೋಟು ತಲೆಗೆ ಪಾಕಿಸ್ತಾನ ಪೊಲೀಸರು 30 ಲಕ್ಷ ರೂ. ಬಹುಮಾನ ಘೋಷಿಸಿದ್ದರು.  ಲಾಹೋರ್‍ನಲ್ಲಿರುವ ಸರ್ಕಾರಿ ಕಚೇರಿಯೊಂದರ ಮೇಲೆ ದಾಳಿ ನಡೆಸಲು ಚೋಟು ಮತ್ತು ಆತನ ಸಹಚರರು ಸಂಚು ರೂಪಿಸಿದ್ದರು.

ಮಂಗಳವಾರ ಮಧ್ಯರಾತ್ರಿ ನಾಲ್ಕು ಮೋಟಾರ್ ಬೈಕ್‍ಗಳೊಂದಿಗೆ ಫಾರೂಕಾಬಾದ್‍ನಿಂದ ಬರುತ್ತಿದ್ದರು. ಲಾಹೋರ್‍ನಿಂದ 40 ಕಿ.ಮೀ. ದೂರದಲ್ಲಿರುವ ಶೇಖ್‍ಪುರ್‍ನಲ್ಲಿ ಭಯೋತ್ಪಾದನಿ ನಿಗ್ರಹ ದಳ (ಸಿಟಿಡಿ) ಸಿಬ್ಬಂದಿ ಇವರನ್ನು ಅಡ್ಡಗಟ್ಟಿದರು. ಆಗ ಭೀಕರ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಆಸೀಫ್ ಚೋಟು ಸಹಿತ ನಾಲ್ವರು ಉಗ್ರತು ಹತರಾದರು. ಉಳಿದ ಮೂವರು ಭಯೋತ್ಪಾದಕರು ಪರಾರಿಯಾಗಿದ್ದಾರೆ. ಪೊಲೀಸರ ವ್ಯಾಪಕ ಬಲೆ ಬೀಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin