ಪಾಕ್‍ನ 41 ಉಗ್ರಗಾಮಿ ಸಂಘಟನೆಗಳು ಫೇಸ್‍ಬುಕ್‍ನಲ್ಲಿ ಸಕ್ರಿಯ

ಈ ಸುದ್ದಿಯನ್ನು ಶೇರ್ ಮಾಡಿ

Terrorist--01

ಇಸ್ಲಾಮಾಬಾದ್, ಮೇ 31- ಪಾಕಿಸ್ತಾನದ ನಿಷೇಧಿತ 64 ಉಗ್ರಗಾಮಿ ಸಂಘಟನೆಗಳಲ್ಲಿ 41 ಬಣಗಳು ಫೇಸ್‍ಬುಕ್‍ನಲ್ಲಿ ಗ್ರೂಫ್ ಅಥವಾ ವೈಯಕ್ತಿಕ ಬಳಕೆದಾರ ಪೊಫೆಲ್ ಮೂಲಕ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿವೆ ನಿಷೇಧಿತ ಸಂಘಟನೆಗಳಲ್ಲಿ ಸುನ್ನಿ ಮತ್ತು ಶಿಯಾ ಪ್ರತ್ಯೇಕ ಬಣಗಳು, ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಜಾಗತಿಕ ಭಯೋತ್ಪಾದನೆ ಸಂಘಟನೆಗಳು ಹಾಗೂ ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯಗಳ ಪ್ರತ್ಯೇಕತಾವಾದಿ ಗುಂಪುಗಳು ಇದರಲ್ಲಿವೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.


ಈ ನಿಷೇಧಿತ ಸಂಘಟನೆಗಳನ್ನು ಜನರು ಫೇಸ್‍ಬುಕ್‍ನಲ್ಲಿ ಶೋಧಿಸುತ್ತಿದ್ದಾರೆ. ಇಂಥ ಸಂಘಟನೆಗಳನ್ನು ಲೈಕ್ ಮಾಡಿದ ಪುಟಗಳು ಹಾಗೂ ಗ್ರೂಪ್ ಮತ್ತು ಯೂಸರ್ ಪ್ರೊಪೈಲ್‍ಗಳ ವಿವರಗಳನ್ನು ತಡಕಾಡುತ್ತಿದ್ದಾರೆ ಎಂಬ ಸಂಗತಿಗಳನ್ನೂ ವರದಿಯಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin