ಪಾಕ್ ಗೆ ಪಾಠ ಕಲಿಸುವರೇ ಮೋದಿ.? ತ್ರಿಸೇನಾ ಮುಖ್ಯಸ್ಥರ ಜೊತೆ ಮಹತ್ವದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Modi-meet

ನವದೆಹಲಿ, ಸೆ.24- ಕಾಶ್ಮೀರದ ಉರಿ ವಲಯದ ಸೇನಾ ನೆಲೆ ಮೇಲೆ ಭಯೋತ್ಪಾದಕರು ನಡೆಸಿದ ಭಯಾನಕ ದಾಳಿ ಹಿನ್ನೆಲೆಯಲ್ಲಿ ಉದ್ಭವಿಸಿರುವ ಗಂಭೀರ ಪರಿಸ್ಥಿತಿ ಕುರಿತು ಭಾರತೀಯ ಸೇನಾಪಡೆಯ ಮೂರು ವಿಭಾಗಗಳ ಮುಖ್ಯಸ್ಥರು ಇಂದು ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದರು. ರಾಜಧಾನಿ ದೆಹಲಿಯ ಏಳು ಲೋಕಶಿಕ್ಷಣ ಮಾರ್ಗ್‍ನಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ಭೂಸೇನೆ, ನೌಕಾದಳ ಮತ್ತು ವಾಯುಪಡೆಯ ಮುಖ್ಯಸ್ಥರು ಮೋದಿ ಅವರನ್ನು ಭೇಟಿ ಮಾಡಿ ಪಾಕಿಸ್ತಾನಕ್ಕೆ ಭಾರತ ನೀಡಬೇಕಾದ ಪ್ರತಿಕ್ರಿಯೆ ಕುರಿತು ಚರ್ಚಿಸಿದರೆಂದು ಮೂಲಗಳು ಹೇಳಿವೆ.

ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಬೇಕೆಂಬ ದೃಢ ನಿಲುವು ಹೊಂದಿರುವ ಮೋದಿ ಅವರು ಈ ಮೂರು ವಿಭಾಗದ ಸೇನಾ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿರುವ ನಡೆ ತೀವ್ರ ಕತೂಹಲ ಕೆರಳಿಸಿದೆ. ಭೂ ಸೇನೆ ಮುಖ್ಯಸ್ಥ ಜನರಲ್ ದಲ್‍ಬೀರ್‍ಸಿಂಗ್, ಏರ್‍ಚೀಫ್ ಮಾರ್ಷಲ್ ಅರುಫ್ ರಹಾ ಹಾಗೂ ನೌಕಾಪಡೆಯ ವೈಸ್ ಅಡ್ಮಿರಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಪ್ರಧಾನಿ ಅವರಿಗೆ ಪ್ರಸ್ತುತ ಸನ್ನಿqವೇಶ ಮತ್ತು ಸೇನಾ ಸಿದ್ಧತೆ ಬಗ್ಗೆ ವಿವರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin