ಪಾಕ್ ಗೆ ಪೆಂಟಗನ್ ಮತ್ತೆ ಛೀಮಾರಿ

ಈ ಸುದ್ದಿಯನ್ನು ಶೇರ್ ಮಾಡಿ

Pentagan

ವಾಷಿಂಗ್ಟನ್, ಆ.23-ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಬೇಕಾದುದು ಪಾಕಿಸ್ತಾನದ ಹಿತಾಸಕ್ತಿ ಎಂದು ಪುನರುಚ್ಚರಿಸಿರುವ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್, ಇದರಲ್ಲಿ ವಿಫಲವಾದ ಕಾರಣಕ್ಕಾಗಿ ಪಾಕ್ಗೆ 300 ದಶಲಕ್ಷ ಡಾಲರ್ ಮೊತ್ತದ ಮಿಲಿಟರಿ ನೆರವನ್ನು ತಡೆಹಿಡಿದಿದ್ದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.  ಭಯಾನಕ ಭಯೋತ್ಪಾದಕ ಹಖ್ಖನಿ ಜಲದ ವಿರುದ್ಧ ಸಮಾಧಾನಕರ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನ ಸಂಪೂರ್ಣ ವಿಫಲವಾಗಿದೆ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಪೆಂಟಗನ್, ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಗಳ ವಿರುದ್ಧ ಕ್ರಮ ಕೈಕೊಳ್ಳಬೇಕಾದುದು ಪಾಕ್ನ ಕರ್ತವ್ಯ ಎಂದು ಒತ್ತಿ ಹೇಳಿದೆ.

ಅಫ್ಘಾನಿಸ್ತಾನದಲ್ಲಿನ ಅಮೆರಿಕ ಸೇನಾಪಡೆಗಳು, ಅಫ್ಘನ್ ಸರ್ಕಾರ ಮತ್ತು ಅಮಾಯಕ ನಾಗರಿಕ ಮೇಲೆ ಹಖ್ಖನಿ ಭಯೋತಾದಕರ ಜಲವು ಆಕ್ರಮಣಗಳನ್ನು ನಡೆಸಿದೆ. ಆದರೆ ಇಂಥ ಉಗ್ರಗಾಮಿ ಬಣದ ವಿರುದ್ಧ ಸಾಧ್ಯವಾದಷ್ಟೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಪಾಕ್ ವಿಫಲವಾಗಿದೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಪೀಟರ್ ಕುಕ್ ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin