ಪಾಕ್ ಗೆ ಪ್ರತ್ಯುತ್ತರ : 60 ಸೆಕೆಂಡ್‍ಗಳಲ್ಲೇ 2 ಬಂಕರ್‍ಗಳು ಉಡೀಸ್

ಈ ಸುದ್ದಿಯನ್ನು ಶೇರ್ ಮಾಡಿ

Pakistan

ಕಾಶ್ಮೀರ, ಮೇ 8- ಕಾಶ್ಮೀರ ಕಣಿವೆಯ ಪೂಂಚ್ ಜಿಲ್ಲೆ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಇಬ್ಬರು ಭಾರತೀಯರ ಶಿರಚ್ಛೇದನ ಮಾಡಿ ಪೈಶಾಚಿಕ ಕೃತ್ಯ ಎಸಗಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಪಡೆ ಇಂದು ಮತ್ತೊಮ್ಮೆ ದಿಟ್ಟ ಉತ್ತರ ನೀಡಿದೆ. ಭಾರತೀಯ ಯೋಧರು ಇಂದು ಆರು ಮಾರ್ಟರ್‍ಗಳಿಂದ ಮಿಂಚಿನ ದಾಳಿ ನಡೆಸಿ ಕೇವಲ 60 ಸೆಕೆಂಡ್‍ಗಳಲ್ಲಿ ಪಾಕಿಸ್ತಾನದ ಎರಡು ಬಂಕರ್‍ಗಳನ್ನು (ಯೋಧರ ರಕ್ಷಣಾ ತಾಣ) ಧ್ವಂಸಗೊಳಿಸಿದ್ದಾರೆ. 

ಈ ಪ್ರತೀಕಾರದ ದಾಳಿಯಿಂದ ಪಾಕ್ ರೇಂಜರ್‍ಗಳು ಬೆಚ್ಚಿ ಬಿದ್ದಿದ್ದಾರೆ. ಭಾರತದ ವೀರ ಯೋಧರು ಪಾಕಿಸ್ತಾನದ ಕ್ರೌರ್ಯಕ್ಕೆ ಹುತಾತ್ಮರಾದ ಒಂದು ವಾರದ ನಂತರ ನಡೆದ ಈ ದಾಳಿಯ  ನಡೆದಿದೆ. ಈ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.

ಪೂಂಚ್ ಜಿಲ್ಲೆಯ ಕೃಷ್ಣಾಘಾಟಿ ಸೆಕ್ಟೆರ್ ಬಳಿ ಯೋಧರು ಪಾಕಿಸ್ತಾನ ಬಂಕರ್‍ಗಳನ್ನು ಗುರಿಯಾಗಿಟ್ಟುಕೊಂಡು ಬೆಳಗ್ಗೆ ಮಿಂಚಿನ ದಾಳಿ ನಡೆಸಿದರು. ರಾಕೆಟ್ ಲಾಂಚರ್‍ನಿಂದ ಚಿಮ್ಮಿದ ಆರು ಲಘು ಕ್ಷಿಪಣಿಗಳು ಪಾಕ್‍ನ ಎರಡು ಬಂಕರ್‍ಗಳು ಸರ್ವನಾಶವಾದವು. ಬಂಕರ್‍ಗಳ ಒಳಗಿದ್ದ ಶಸ್ತ್ರಾಸ್ತ್ರಗಳು ಮತ್ತು ಇತರ ಸಾಧನ ಸಲಕರಣೆಗಳು ಪುಡಿಪುಡಿಯಾಗಿವೆ. ಕೇವಲ 60 ಸೆಕೆಂಡ್‍ಗಳಲ್ಲಿ ನಡೆದ ಈ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ಭಾರತದ ಅಗಾಧ ಸಾಮಥ್ರ್ಯದ ಮನವರಿಕೆಯಾಗಿದೆ.

ಭಾರತೀಯ ಯೋಧರ ದಾಳಿಗೆ ಬಂಕರ್‍ಗಳು ಛಿದ್ರ ಛಿದ್ರವಾಗಿರುವ ದೃಶ್ಯಗಳು ಕೆಲವು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇಬ್ಬರು ಯೋಧರನ್ನು ಕೊಂದು ದೇಹವನ್ನು ವಿರೂಪಗೊಳಿಸಿದ್ದಕ್ಕೆ ತಕ್ಷಣ ಪ್ರತೀಕಾರದ ಕ್ರಮಗಳನ್ನು ಕೈಗೊಂಡ ಸೇನಾಪಡೆ ಬಂಕರ್‍ಗಳನ್ನು ಧ್ವಂಸಗೊಳಿಸಿ, ಪಾಕಿಸ್ತಾನದ 10 ರೇಂಜರ್‍ಗಳನ್ನು ಕೊಂದಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin