ಪಾಕ್-ಚೀನಾ ಕಬಳಿಸಿರುವ ನೆಲದ ಬಗ್ಗೆ ಇಡೀ ಭಾರತ ಒಂದಾಗಬೇಕು

ಈ ಸುದ್ದಿಯನ್ನು ಶೇರ್ ಮಾಡಿ

POK

ಕೇಂದ್ರದ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ದಿಟ್ಟ ನಿಲುವಿನಿಂದಾಗಿ ಪಾಕಿಸ್ತಾನ ಈಗ ಬಿಕ್ಕಟ್ಟಿಗೆ ಸಿಲುಕಿದೆ ಎನ್ನಬಹುದಿತ್ತೇನೋ… ಆ ದೇಶಕ್ಕೆ ಆತ್ಮ ಸಾಕ್ಷಿ ಎಂಬುದೊಂದಿದ್ದಿದ್ದರೆ…. ಆದರೆ ಹಾಗಿಲ್ಲ… ಪಾಕಿಸ್ತಾನದ ಮೇಲೆ ಇದಾವುದು ಪರಿಣಾಮ ಬೀರುತ್ತಿಲ್ಲ… ಏಕೆಂದರೆ ಅಂದಿನಿಂದ ಇಂದಿನವರೆಗೂ ಪಾಕಿಸ್ತಾನದ ಆಡಳಿತಗಾರರ ನರನಾಡಿಗಳಲ್ಲಿ ಹರಿಯುತ್ತಿರುವುದು ಬರೀ ಮಾನವ ದ್ವೇಷ, ದುರಾಸೆ. ಭಾರತಕ್ಕೆ ಮುಕುಟುಪ್ರಾಯವಾಗಿರುವ ಸೌಂದರ್ಯದ ಬೀಡಾಗಿರುವ ಜಮ್ಮುಕಾಶ್ಮೀರ, ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ನೆಲದ ಕಣಕಣವೂ ರಕ್ತಸಿಕ್ತವಾಗಿದೆ.
ಹಚ್ಚಹಸಿರಿನಿಂದ ಕಂಗೊಳಿಸಬೇಕಾಗಿದ್ದ ಈ ಕಣಿವೆ ರಾಜ್ಯ, (ಪಾಕಿಸ್ತಾನ ಕೃಪೋಪಾಷಿತ) ಉಗ್ರರ ಕ್ರೌರ್ಯದಿಂದಾಗಿ ಕೆಂಪಾಗಿ ಬಿಟ್ಟಿದೆ. ಅಲ್ಲಿನ ಜನ ಇಂದು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಅವರ ನಿಟ್ಟುಸಿರಿನಿಂದ ಅಲ್ಲಿನ ತಂಗಾಳಿಯೆಲ್ಲವೂ ಬಿಸಿಯಾಗಿ ಬಿಟ್ಟಿದೆ… ಇದಕ್ಕೆ ಪರಿಹಾರವಿಲ್ಲವೇ? ಈ ನಿತ್ಯ ನರಕದಿಂದ ಅಲ್ಲಿನ ಅಮಾಯಕರಿಗೆ ಮುಕ್ತಿ ಇಲ್ಲವೇ? ಇದೆ… ಎಲ್ಲಿದೆ ಹಾಗಾದರೆ…? ಹೇಗಿದೆ ಅದು?

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಹೇಳಿದ ಒಂದು ಮಾತಿನಲ್ಲಿದೆ ಇದಕ್ಕೆಲ್ಲ ಅಂತ್ಯ ಕಾಣಿಸುವ ಶಕ್ತಿ. ಆದರೆ ಆ ಮಾತು ಕೃತಿಗಿಳಿಯುವುದು ವಾಸ್ತವದಿಂದ ಸ್ವಲ್ಪ ದೂರವಿದೆಯೇನೋ ಎಂಬ ಸಂದೇಹವೂ ಇಲ್ಲದಿಲ್ಲ. ನಿಜ… `ನಮಗೆ ಬುದ್ದಿ ಹೇಳುವ ಮೊದಲು ಪಾಕಿಸ್ತಾನ ಕಾಶ್ಮೀರ ಮತ್ತು ಗಿಲ್ಗಿಟ್-ಬಲ್ಟಿಸ್ಥಾನ್‍ಗಳಲ್ಲಿ ಅದು ನಡೆಸುತ್ತಿರುವ ಹಿಂಸಾಚಾರಗಳ ಬಗ್ಗೆ ಆ ರಾಷ್ಟ್ರ ವಿಶ್ವದೆದುರು ತಲೆ ಎತ್ತಿ ಉತ್ತರ ಹೇಳಲಿ… ಎಂಬ ಸವಾಲಿಗೆ ಪಾಕಿಸ್ತಾನ ನಾಚಿ ತಲೆತಗ್ಗಿಸಬೇಕಿತ್ತು. ಆದರೆ ಅಲ್ಲಿ ಇಂತಹ ಯಾವುದೇ ಮಾತುಗಳಿಗೂ ಬೆಲೆ ಇಲ್ಲ.   ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಇಡೀ ವಿಶ್ವವೇ ಮುಕ್ತ ಕಂಠದಿಂದ ಪ್ರಶಂಸಿಸಿದೆ. ಅವರ ಈ ವಿದೇಶಾಂಗ ನೀತಿಯು ಅವರ ರಾಜಕೀಯ ಮತ್ಸದ್ದಿತನದ ಜಾಣ್ಮೆಯನ್ನು ಎತ್ತಿ ಹಿಡಿದಿದೆ. ಇಡೀ ವಿಶ್ವವೇ ಇಂದು ಭಾರತದತ್ತ ನೋಡುವುದು ಮಾತ್ರವಲ್ಲದೆ ನೆರೆಯ ಪಾಕಿಸ್ತಾನ ಮತ್ತು ಚೀನಾ ದೇಶಗಳು ನಡೆಸುತ್ತಿರುವ ಕುತಂತ್ರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಕೆಲಸವನ್ನು ನರೇಂದ್ರ ಮೋದಿ ಅತ್ಯಂತ ಜಾಣತನದಿಂದ ಮಾಡಿರುವುದು ಪಾಕಿಸ್ತಾನಕ್ಕೆ ಅರ್ಥವಾಗದ ಅಥವಾ ಗೊತ್ತಿಲ್ಲದ ವಿಷಯವೇನಲ್ಲ. ಆದರೂ ಪಾಕಿಸ್ತಾನ ಮಾತ್ರ ತನ್ನ ಎಂದಿನ ಕುಬುದ್ಧಿಯನ್ನು ಬಿಡುತ್ತಿಲ್ಲ.
ಇದಕ್ಕೆ ಉದಾಹರಣೆಯೆಂದರೆ 70ನೇ ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಭಾನುವಾರ ಕೂಡ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಭಾರತೀಯ ಸೇನಾ ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿರುವುದು.

ಕ್ರಿ.ಶ. 7ನೇ ಶತಮಾನದಲ್ಲಿಯೇ ಅಂದಿನ ಹನ್ಜಾ-ನಗರ್ ಮತ್ತು ಬ್ರಿಟಿಷ್ ಆಡಳಿತದ ಮಧ್ಯೆ ಸಂಪರ್ಕ ಸೇತುವೆಯಂತೆ ಗಿಲ್ಗಿಟ್ ಏಜೆನ್ಸಿ ಎಂಬ ಹೆಸರಿನ ಸಂಸ್ಥೆಯೊಂದನ್ನು ಸ್ಥಾಪಿಸಲಾಯಿತು.
ಅದಾದ ನಂತರ 1935ರಲ್ಲಿ ಅಂದಿನ ಜಮ್ಮುಕಾಶ್ಮೀರ ರಾಜ್ಯದ ಮಹಾರಾಜ ಹರಿಸಿಂಗ್ ಅವರಿಂದ ಈ ಪ್ರದೇಶವನ್ನು ಗಿಲ್ಗಿಟ್ ಏಜೆನ್ಸಿ 60 ವರ್ಷಗಳ ಲೀಸ್‍ಗೆ ಪಡೆದಿತ್ತು ಎಂಬ ಇತಿಹಾಸ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಇದೇ ಗಿಲ್ಗಿಟ್-ಬಲ್ಟಿಸ್ಥಾನ್ ಹೆಸರು ಖಾಯಂ ಆಗಲು ಕಾರಣವಾಯಿತು. 1947ರಲ್ಲಿ ಭಾರತ-ಪಾಕ್ ವಿಭಜನೆಯಾದಾಗ ಗಿಲ್ಗಿಟ್ ಏಜೆನ್ಸಿ ರದ್ದುಪಡಿಸಲಾಯಿತು. ಮುಂದೆ 1962ರಲ್ಲಿ ಈ ಪ್ರದೇಶದ ಉತ್ತರದ ಕೆಲ ಭಾಗವನ್ನು ಪಾಕಿಸ್ತಾನ ಚೀನಾಕ್ಕೆ ಕಾಣಿಕೆಯಾಗಿ ನೀಡಿತು. (ಅದು ಭಾರತ- ಚೀನಾ ಯುದ್ಧ ಸಂದರ್ಭ). ಈ ಭಾಗವನ್ನು ಅಕ್ಸಾಯ್ ಚಿನ್ ಎಂದು ಕರೆಯಲಾಗುತ್ತಿದೆ.
ಪ್ರಸಕ್ತ ವಿದ್ಯಮಾನ:

ಜಮ್ಮುಕಾಶ್ಮೀರ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಗಳಲ್ಲಿ ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ. ಇದುವರೆಗೆ ಈ ಪ್ರದೇಶದಲ್ಲಿ ಹಿಂಸೆಗೆ ಬಲಿಯಾದವರ ಸಂಖ್ಯೆ ಲೆಕ್ಕವಿಲ್ಲದಷ್ಟು. ತೀರಾ ಇತ್ತೀಚೆಗೆ ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆಗೆ ಸಂಬಂಧಿಸಿದಂತೆ ಕಳೆದ 36 ದಿನಗಳಿಂದ ಕಾಶ್ಮೀರದಲ್ಲಿ ನಿರಂತರ ಹಿಂಸಾಚಾರ ನಡೆದು ಪೆÇಲೀಸರು ಸೇರಿದಂತೆ 55ಕ್ಕೂ ಹೆಚ್ಚು ಜನ ಅಮಾಯಕರು ಜೀವ ಕಳೆದುಕೊಂಡಿದ್ದಾರೆ.  ಕಾಶ್ಮೀರಿ ಜನತೆ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ 36 ದಿನಗಳಿಂದಲೂ ಕಫ್ರ್ಯೂ( ಕಂಡಲ್ಲಿ ಗುಂಡಿಕ್ಕಿ) ನೆರಳಲ್ಲಿ ಬದುಕುತ್ತಿದ್ದಾರೆ ಎಂದರೆ ಇದರ ಭೀಕರತೆಯನ್ನು ಅರ್ಥ ಮಾಡಿಕೊಳ್ಳಬಹುದು.

ಇಲ್ಲಿ ಜೀವಗಳಿಗೆ ಎಂದೂ ಬೆಲೆಯಿಲ್ಲ. ಪಾಕಿಸ್ತಾನಕ್ಕೆ ಬೇಕಾಗಿರುವುದು ಇಲ್ಲಿನ ಜೀವಂತ ಜನಗಳ ಹಿತವಲ್ಲ. ಅವರಿಗೆ ಬೇಕಾಗಿರುವುದು ಕಾಶ್ಮೀರದ ನೆಲ… ಬರೀ ಮಣ್ಣು ಮಾತ್ರ…!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಶ್ಮೀರ ಜನತೆ ಪ್ರತ್ಯೇಕತಾವಾದಿಗಳ ಬೆದರಿಕೆಯ ನಡುವೆಯೂ ಪ್ರಜಾತಂತ್ರಾತ್ಮಕ ಸಿದ್ದಾಂತದಲ್ಲಿ ನಂಬಿಕೆಯಿಟ್ಟು ತಮ್ಮ ಹಕ್ಕು ಚಲಾಯಿಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ಇದು ಅಲ್ಲಿನ ಜನತೆಯ ಸ್ವಾತಂತ್ರ್ಯ ಪ್ರಿಯತೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ನೀಡಿದ ಪ್ರಾಶಸ್ತ್ಯ.  ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನವು ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಭಾರೀ ಸಾವು-ನೋವುಗಳು ಸಂಭವಿಸಿವೆ. ಇದನ್ನು ವಿರೋಧಿಸಿ ಅಲ್ಲಿನ ಜನ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.  ಅಂದರೆ ಜಮ್ಮುಕಾಶ್ಮೀರ ಅಥವಾ ಪಾಕ್ ಆಕ್ರಮಿತ ಕಾಶ್ಮೀರದ ಜನ ಯಾವುದೇ ರೀತಿಯಲ್ಲಿ ಹಿಂಸಾಚಾರವನ್ನು ಬಯಸುವುದಿಲ್ಲ. ಆದರೆ ಜನ ನಾಯಕರಿಗೆ ಹಿಂಸಾಚಾರವೇ ವೋಟು ಗಳಿಸುವ ಮತ್ತು ಅಧಿಕಾರದಲ್ಲುಳಿಯುವ ಏಕೈಕ ಮಂತ್ರವಾಗಿದೆ.

ಇಡೀ ದೇಶ ಬೆಂಬಲಿಸಬೇಕು:

ಪಾಕಿಸ್ತಾನದ ಇಂತಹ ಉದ್ಧಟತನ, ಕ್ರೌರ್ಯ, ಉಪದ್ವಾಪಿತನಗಳನ್ನು ಮಟ್ಟ ಹಾಕಿ ಬುದ್ದಿ ಕಲಿಸುವ ಮತ್ತು ಈ ಪ್ರದೇಶದ ಜನತೆಗೆ ನೆಮ್ಮದಿಯ ಬದುಕಿನ ಭರವಸೆ ನೀಡುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದ್ದು , ಅವರ ಈ ಪ್ರಯತ್ನಕ್ಕೆ ಇಡೀ ದೇಶ ಬೆಂಬಲಿಸಬೇಕಿದೆ.  ಪಾಕಿಸ್ತಾನದ ದುರಹಂಕಾರವನ್ನು ಮುರಿದು, ಒಳಗೊಳಗೇ ಆ ರಾಷ್ಟ್ರಕ್ಕೆ ಬೆಂಬಲ ನೀಡುತ್ತಿರುವ ಪ್ರತ್ಯೇಕತಾವಾದಿಗಳ ಸೊಲ್ಲಡಗಿಸುವ ಕಾಲ ಸನ್ನಿಹಿತವಾಗುತ್ತಿದೆ.   ಪ್ರತ್ಯೇಕತಾವಾದಿಗಳು: ಈ ಮಧ್ಯೆ ಪ್ರತ್ಯೇಕತವಾದಿಗಳೂ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಪ್ರತ್ಯೇಕತಾವಾದಿ ನಾಯಕರಾದ ಮಿರ್ವಾಯಿಜ್ ಉಮ್ಮರ್ ಫಾರೂಕ್, ಸೈಯದ್ ಅಲಿ ಷಾ ಗಿಲಾನಿ, ಹುರಿಯತ್ ಕಾನ್ಫರೆನ್ಸ್ ಹಾಗೂ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರೆಂಟ್ ಮುಖಂಡರು ಭಾರತದ ವಿರುದ್ಧ ಅಲ್ಲಿನ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.   ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕ ಗಲಾಂನಬಿ ಅಜಾದ್, ಎಡ ಪಕ್ಷಗಳ ನಾಯಕರಾದ ಸೀತಾರಾಮ್ ಯೆಚೂರಿ, ಡಿ.ರಾಜ ಮುಂತಾದವರು ಪಕ್ಷಭೇದ ಮರೆತು ಸರ್ಕಾರವನ್ನು ಬೆಂಬಲಿಸುವ ಮಾತನಾಡಿರುವುದು ಒಂದು ಒಳ್ಳೆಯ ಬೆಳವಣಿಗೆ.  ಸೈನಿಕರು ಸಂಯಮದಿಂದ ವರ್ತಿಸಬೇಕು. ಆದರೆ ಘಾತಕಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ. ಭದ್ರತೆ, ರಕ್ಷಣೆ ವಿಷಯದಲ್ಲಿ ಯಾವುದೇ ರಾಜೀ ಇಲ್ಲೆ ಎಂಬ ಮಾತನ್ನು ಹೇಳುವ ಮೂಲಕ ಭಯೋತ್ಫಾದಕರಿಗೆ, ಜೊತೆಗೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಪ್ರಧಾನಿ ಮೋದಿ.

ದುರದೃಷ್ಟಕರ:

ಆದರೆ ಭಾರತ-ಪಾಕಿಸ್ತಾನ ಗಡಿಪ್ರದೇಶದಲ್ಲಿ ಭಾರತೀಯ ಸೈನಿಕರು ಅಮಾಯಕ ಜನತೆಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ನಮ್ಮ ಜನಗಳೇ ಹುಯಿಲೆಬ್ಬಿಸುತ್ತಿರುವುದು ದುರದೃಷ್ಟಕರ.   ಇದಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುವೊಂದರಲ್ಲಿ ಸ್ವಾತಂತ್ರ್ಯ ದಿನದ ಮುನ್ನಾ ದಿನ ಕೆಲವರು ಸಭೆ ಸೇರಿ ಸೈನಿಕರ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಯೋಧರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿರುವುದು ನಿಜಕ್ಕೂ ಆಕ್ಷೇಪಾರ್ಹ ಬೆಳವಣಿಗೆ.   ಆದಷ್ಟು ಬೇಗ ಪಾಕಿಸ್ತಾನಕ್ಕೆ ಕಿವಿ ಹಿಂಡಿ ಜನರ ನರಕಯಾತನೆಯನ್ನು ತಪ್ಪಿಸುವ ಹೊಣೆಗಾರಿಕೆ ಇಡೀ ದೇಶದ ಜನತೆಯ ಮೇಲಿದೆ.

ವ್ಯಾಪಕ ಖಂಡನೆ:

ಒಂದು ಕಡೆ ನಾವು ಶಾಂತಿಯುತ ಮಾತುಕತೆಗೆ ಸಿದ್ದ ಎಂದು ಹೇಳುತ್ತಲೇ ಇನ್ನೊಂದು ಕಡೆ ಭಯೋತ್ಪಾದಕರು ಮತ್ತು ಭಯೋತ್ಪಾದನೆಗಳನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ಇಬ್ಬಗೆ ನೀತಿಯನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಮತ್ತು ಭದ್ರತಾ ಮಂಡಳಿ ಸದಸ್ಯರು ಹಾಗೂ ಅಮೆರಿಕ ತೀವ್ರವಾಗಿ ಖಂಡಿಸಿದೆ.   ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಬಿಟ್ಟು ನೆರೆ ದೇಶದೊಂದಿಗೆ ಸೌಹಾರ್ದತೆಯ ಮಾತುಕತೆ ನಡೆಸಲು ಪ್ರಾಮಾಣಿಕವಾಗಿ ಮುಂದಾಗಬೇಕು ಎಂದು ಅಮೆರಿಕ ನೇರವಾಗಿಯೇ ಹೇಳಿದೆ.
ಪ್ರಧಾನಿ ಮೋದಿಗೆ ಪ್ರಶಂಸೆ: ಪಾಕಿಸ್ತಾನದ ನಿರಂತರ ಕಿರುಕುಳವನ್ನು ನಿವಾರಿಸಲು ಮಾತುಕತೆ ಮೂಲಕ ಪ್ರಯತ್ನ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ರಾಜ ನೀತಿ ಮತ್ತು ಕ್ರಮವನ್ನು ಅಮೆರಿಕ ಮುಕ್ತ ಕಂಠದಿಂದ ಪ್ರಶಂಸಿಸಿದೆ.

  • ಚಿಕ್ಕರಸು

► Follow us on –  Facebook / Twitter  / Google+

Facebook Comments

Sri Raghav

Admin