ಪಾಕ್ ಜೈಲಲ್ಲಿ ಕುಲಭೂಷಣ್ ಜಾಧವ್’ಗೆ ಚಿತ್ರಹಿಂಸೆ : ತಲೆಗೆ ಗಾಯ, ಕೆಳಗಿವಿ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Jadhav--01

ಇಸ್ಲಾಮಾಬಾದ್/ನವದೆಹಲಿ, ಡಿ.26-ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಹಿಂಸೆ ನೀಡುತ್ತಿದೆಯೇ..? ಜÁಧವ್ ಅವರನ್ನು ತಾಯಿ ಆವಂತಿ ಮತ್ತು ಪತ್ನಿ ಚೇತನ್‍ಕುಲ್ ಅವರು 21 ತಿಂಗಳ ಬಳಿಕ ಭೇಟಿ ಮಾಡಿದ ನಂತರ ಸಾರ್ವಜನಿಕವಾಗಿ ಪ್ರಕಟಗೊಂಡ ದೃಶ್ಯಗಳು ಮತ್ತು ಫೋಟೋಗಳು ಪಾಕಿಸ್ತಾನಿ ಜೈಲಿನಲ್ಲಿ ಅವರಿಗೆ ಹಿಂಸೆ ನೀಡಿರುವ ಸುಳಿವು ನೀಡಿದೆ.

ಜಾಧವ್ ಅವರ ತೂಕದಲ್ಲಿ ಗಣನೀಯ ಇಳಿಕೆಯಾಗಿದೆ. ಅವರ ಬಲಭಾಗದ ಕೆಳಗಿವಿ ನಾಪತ್ತೆಯಾಗಿದ್ದರೆ, ತಲೆ ಮತ್ತು ಕುತ್ತಿಗೆ ಭಾಗದಲ್ಲಿ ಕಪ್ಪು ಮತ್ತು ನೀಲಿ ಗಾಯದ ಕಲೆ ಇದೆ. ಗಾಜಿನ ಪರದೆ, ಇಂಟರ್‍ಕಾಂ ಮೂಲಕ ತಾಯಿ ಮತ್ತು ಪತ್ನಿ ಜೊತೆ ಜಾಧವ್ ಮಾತನಾಡುತ್ತಿರುವ ದೃಶ್ಯಗಳನ್ನು ಪಾಕಿಸ್ತಾನ ಬಿಡುಗಡೆ ಮಾಡಿದ್ದ ನಂತರ ಅದರಲ್ಲಿ ಮಾಜಿ ನೌಕಾಧಿಕಾರಿಯ ಸ್ಥಿತಿ ಬಗ್ಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Facebook Comments

Sri Raghav

Admin