ಪಾಕ್ ಜೊತೆ ಸಮಕಾಲೀನ ಚರ್ಚೆ ಮಾತ್ರ : ವಿಕಾಸ್ ಸ್ವರೂಪ್
ನವದೆಹಲಿ, ಆ.14- ಜಮ್ಮು ಮತ್ತು ಕಾಶ್ಮೀರ ಕುರಿತ ಮಾತುಕತೆಗೆ ಪಾಕಿಸ್ತಾನದ ಪ್ರಸ್ತಾಪವನ್ನು ತಳ್ಳಿ ಹಾಕಿರುವ ಭಾರತ-ಪಾಕ್ ಸಂಬಂಧಗಳಲ್ಲಿ ಸಮಕಾಲೀನ ಮತ್ತು ಸೂಕ್ತ ವಿಷಯಗಳನ್ನು ಮಾತ್ರ ಚರ್ಚಿಸುವುದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಈ ಕುರಿತ ರಾಜಧಾನಿಯಲ್ಲಿ ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಪಾಕಿಸ್ತಾನದೊಂದಿಗೆ ಪ್ರಚಲಿತ ಮತ್ತು ಸಮಂಜಸ ವಿಷಯಗಳನ್ನು ಮಾತ್ರ ಭಾರತ ಚರ್ಚಿಸಲಿದೆ. ಇದರಲ್ಲಿ ಪಾಕ್ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಬೇಕೆಂಬ ವಿಷಯವೂ ಒಳಗೊಂಡಿರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಸಂಬಂಧಗಳಲ್ಲಿ ಸಮಕಾಲೀನ ಮತ್ತು ಪ್ರಚಲಿತ ವಿಚಾರಗಳ ಕುರಿತು ಸಮಾಲೋಚನೆಯನ್ನು ಭಾರತ ಸ್ವಾಗತಿಸಲಿದೆ. ಇದೇ ವೇಳೆ ಬಹದ್ದೂರ್ ಅಲಿಯಂತಹ ಭಯೋತ್ಪಾದಕರ ಅತಿಕ್ರಮಣ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಪಾಕಿಸ್ತಾನ ನಿಲ್ಲಿಸಬೇಕೆಂಬ ವಿಷಯವೂ ಈ ಬಾರಿ ಚರ್ಚೆಯಲ್ಲಿ ಸೇರ್ಪಡೆಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
► Follow us on – Facebook / Twitter / Google+