ಪಾಕ್ ಪರವಾಗಿದ್ದಾರೆಯೇ ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್..?

ಈ ಸುದ್ದಿಯನ್ನು ಶೇರ್ ಮಾಡಿ

Trump-01

ನವದೆಹಲಿ, ಡಿ.1-ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪರವಾಗಿದ್ದಾರೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ಪಾಕ್‍ನ ವಿರೋಧಿ ಎಂದೇ ಗುರುತಿಸಿಕೊಂಡಿದ್ದ ಅವರು ನಿನ್ನೆ ನೀಡಿದ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾರತಕ್ಕೆ ಹೊಸ ಸಂಕಷ್ಟ ಎದುರಾಗುವ ಆತಂಕವೂ ಇದೆ.  ಪಾಕಿಸ್ತಾನದಲ್ಲಿ ಇತ್ಯರ್ಥವಾಗದೇ ಉಳಿದಿರುವ ಸಮಸ್ಯೆಗಳಿಗೆ (ಕಾಶ್ಮೀರ ವಿವಾದ ಸೇರಿದಂತೆ) ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ತಾವು ಯಾವುದೇ ಪಾತ್ರ ವಹಿಸಲು ಸಿದ್ದ ಎಂದು ಡೊನಾಲ್ಡ್ ನಿನ್ನೆ ಹೇಳಿಕೆ ನೀಡಿದ್ದಾರೆ. ಇದು ಅವರ ಯು-ಟರ್ನ್ ಧೋರಣೆಯನ್ನು ರುಜುವಾತುಪಡಿಸಿದೆ.

ಕಳೆದ ರಾತ್ರಿ ತಮಗೆ ದೂರವಾಣಿ ಮಾಡಿ ಅಭಿನಂದನೆ ಸಲ್ಲಿಸಿದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಮಾತನಾಡಿದ ಟ್ರಂಪ್ ಕೆಲವು ಗಂಭೀರ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.  ಪಾಕಿಸ್ತಾನದಲ್ಲಿ ಬಾಕಿ ಇರುವ ಯಾವುದೇ ಸಮಸ್ಯೆ-ವಿವಾದಗಳಿರಲಿ, ಅದನ್ನು ನಿವಾರಿಸಲು ತಾವು ಪಾತ್ರ ನಿರ್ವಹಿಸಲು ಸಿದ್ಧ. ಇದನ್ನು ನಾನು ವೈಯಕ್ತಿಕ ಆಸಕ್ತಿಯಿಂದ ಕೈಗೊಳ್ಳುತ್ತೇನೆ ಎಂದು ಷರೀಫ್‍ಗೆ ಭರವಸೆ ನೀಡಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.  ಪಾಕಿಸ್ತಾನದ ಬಗ್ಗೆ ನಕರಾತ್ಮಕ ಧೋರಣೆ ಪ್ರದರ್ಶಿಸುತ್ತಿದ್ದ ಟ್ರಂಪ್ ನಡವಳಿಕೆಯಲ್ಲಿ ಕಂಡುಬಂದಿರುವ ಈ ಬದಲಾವಣೆ ಭಾರತದ ಹುಬ್ಬೇರುವಂತೆ ಮಾಡಿದೆ. ಮುಂದಿನ ಬೆಳೆವಣಿಗೆಗಳನ್ನು ಕಾದು ನೋಡುತ್ತೇವೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಉನ್ನತಾಧಿಕಾರಿಗಳು ಹೇಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin