ಪಾಕ್ ಪ್ರಧಾನಿ ನವಾಜ್‍ಗೆ ಅವಾಜ್ ಹಾಕಿದ ಅಮೇರಿಕ ಸಂಸದ

ಈ ಸುದ್ದಿಯನ್ನು ಶೇರ್ ಮಾಡಿ

Nawaz

ವಾಷಿಂಗ್ಟನ್,ಸೆ.29– ವಿಶ್ವಸಂಸ್ಥೆಯ ವೇದಿಕೆಯನ್ನು ಓರ್ವ ಉಗ್ರಗಾಮಿಯನ್ನು ಹೊಗಳಲು ಬಳಸಿಕೊಂಡ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ವರ್ತನೆಯನ್ನು ಅಮೆರಿಕದ ಪ್ರಭಾವಿ ಸಂಸದರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.  ಭಯೋತ್ಪಾದನೆ ಮೂಲಕ ಹಿಂಸಾಚಾರ ನಡೆಸುತ್ತಿರುವ ಉಗ್ರಗಾಮಿ ಸಂಘಟನೆಯೊಂದನ್ನು ಹೊಗಳಲು ಪಾಕಿಸ್ತಾನ ಪ್ರಧಾನಿಯವರು ವಿಶ್ವಸಂಸ್ಥೆಯನ್ನು ಬಳಸಿಕೊಂಡಿದ್ದು, ಅತ್ಯಂತ ನಿರಾಶಾದಾಯಕ ಎಂದು ಕಾಂಗ್ರೆಸ್ ಸಂಸದ ಟೆಡ್ ಪೋ ಟ್ವೀಟ್‍ನಲ್ಲಿ ಕಟುವಾಗಿ ಟೀಕಿಸಿದ್ದಾರೆ.  ನವಾಜ್ ಷರೀಫ್ ಸೆ.21ರಂದು ವಿಶ್ವಸಂಸ್ಥೆಯ ಸಾಮಾನ್ಯ ಮಹಾಧಿವೇಶನದ ತಮ್ಮ ಭಾಷಣದಲ್ಲಿ ಹಿಜ್‍ಬುಲ್ ಕಮಾಂಡರ್ ಬುರ್ಹನ್ ವಾನಿಯನ್ನು `ಯುವ ನಾಯಕ’ ಎಂದು ಬಣ್ಣಿಸಿದರು.

ಉರಿ ದಾಳಿಗೆ ಖಂಡನೆ: ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಸುಸಾನ್ ರೈಸ್ ಖಂಡಿಸಿದ್ದಾರೆ.
ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೊತೆ ಇಂದು ದೂರವಾಣಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಪರಿಣಾಮಕಾರಿ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin