ಪಾಕ್ ಮೇಲೆ ಭಾರತ ದಿಢೀರ್ ದಾಳಿ : ಭಾರತದ ಬೆನ್ನಿಗೆ ನಿಂತ ಅಮೆರಿಕಾ

ಈ ಸುದ್ದಿಯನ್ನು ಶೇರ್ ಮಾಡಿ

John-Kerry

ನವದೆಹಲಿ,ಸೆ.29- ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ಪಡೆಗಳು ದಿಢೀರ್ ದಾಳಿ ನಡೆಸಿರುವುದನ್ನು ಸ್ವಾಗತಿಸಿರುವ ಅಮೆರಿಕ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಂಪೂರ್ಣ ಬೆಂಬಲ ಘೋಷಿಸಿದೆ. ಈ ಕುರಿತಂತೆ ಭದ್ರತಾ ಸಲಹೆಗಾರ ಅಜಿತ್ ಗೋವೆಲ್ ಜತೆ ದೂರವಾಣಿ ಮೂಲಕ ಮಾತನಾಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಸ್ಟನ್ ಕಾರ್ಟರ್ ಅವರು, ಯಾವುದೇ ಸಂದರ್ಭ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಭಯೋತ್ಪಾದನೆಯನ್ನು ಮಟ್ಟ ಹಾಕುವುದೇ ನಮ್ಮ ಮುಖ್ಯ ಉದ್ದೇಶ ಎಂದು ಭರವಸೆ ನೀಡಿದ್ದಾರೆ.
ಪಾಕಿಸ್ತಾನ ವಿಶ್ವದ ಹಲವು ರಾಷ್ಟ್ರಗಳ ಹಿತವಚನವನ್ನು ಕಡೆಗಣಿಸಿ ಮತ್ತೂ ಕೂಡ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin