ಪಾಕ್ ಮೇಲೆ ಸಂಚಾರಕ್ಕೆ ಖಾಸಗಿ ಏರ್ಲೈನ್ಸ್ ಹಿಂದೇಟು

ಈ ಸುದ್ದಿಯನ್ನು ಶೇರ್ ಮಾಡಿ

Fly

ನವದೆಹಲಿ, ಆ.23– ಭದ್ರತೆಯ ಹಿತದೃಷ್ಟಿಯಿಂದಾಗಿ ಪಾಕಿಸ್ತಾನದ ಮೇಲೆ ವಿಮಾನಗಳ ಹಾರಾಟ ನಡೆಸಲು ಭಾರತದ ಖಾಸಗಿ ವಿಮಾನ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಭಾರತ-ಪಾಕಿಸ್ತಾನ ಬಾಂಧವ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಆತಂಕಗಳು ತಲೆದೋರಿದ್ದು, ಪಾಕ್ ವಾಯು ಪ್ರದೇಶದ ಮೇಲೆ ತನ್ನ ವಿಮಾನಗಳನ್ನು ಹಾರಿಸಲು ಈ ಸಂಸ್ಥೆಗಳು ಒಲ್ಲೆ ಎಂದಿವೆ.
ಭಾರತೀಯ ವಿಮಾನಗಳು ಕೊಲ್ಲಿ(ಗಲ್ಫ್) ದೇಶಗಳಿಗೆ ಹೋಗಲು ಪಾಕಿಸ್ತಾನದ ಮೇಲೆ ಹಾದು ಹೋಗಬೇಕಾಗುತ್ತದೆ. ಆದರೆ, ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ, ಪಾಕ್ ವಾಯುಪ್ರದೇಶವನ್ನು ಹೊರತುಪಡಿಸುವಂತೆ ಇಂಡಿಯನ್ ಪ್ರೈವೇಟ್ ಏರ್ಲೈನ್ಸ್ಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಏರ್ ಇಂಡಿಯಾ, ಜೆಟ್ ಏರ್ವೇಸ್, ಇಂಡಿಗೋ ಮತ್ತು ಸ್ಪೈಸ್ಜೆಟ್ ಗಲ್ಫ್ ದೇಶಗಳಿಗೆ ಪ್ರಯಾಣಿಕರನ್ನು ಹೊತ್ತೊಯ್ಯಲು ಪಾಕಿಸ್ತಾನ ಮೇಲೆ ಹಾದು ಹೋಗಬೇಕಿದೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿರುವುದರಿಂದ ಈ ಮಾರ್ಗವನ್ನು ಹೊರತುಪಡಿಸುವಂತೆ ಖಾಸಗಿ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ.  ಪಾಕ್ ಮಾರ್ಗದ ಬದಲು ಅಹಮದಾಬಾದ್ ಮೂಲಕ ಕೊಲ್ಲಿ ದೇಶಗಳಿಗೆ ಹಾರಲು ಅವಕಾಶ ನೀಡಿದರೆ ಸುರಕ್ಷತೆ ಜತೆಗೆ ಇಂಧನ, ಸಮಯವನ್ನು ಉಳಿಸಬಹುದು. ಭದ್ರತೆ ಮತ್ತು ವಾಣಿಜ್ಯ ದೃಷ್ಟಿಯಿಂದ ಈ ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.  ಖಾಸಗಿ ವಿಮಾನ ಸಂಸ್ಥೆಗಳ ಈ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ರಕ್ಷಣೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಭರವಸೆ ನೀಡಿವೆ.

Facebook Comments

Sri Raghav

Admin