ಪಾನಮತ್ತ ಕಾಂಪೌಂಡರ್‍ನ ಎಡವಟ್ಟಿಗೆ ಬಲಿಯಾಯ್ತು ಮಗು..!

ಈ ಸುದ್ದಿಯನ್ನು ಶೇರ್ ಮಾಡಿ

bagalkot

ಬಾಗಲಕೋಟೆ, ಜೂ.28- ಕುಡಿದ ಮತ್ತಿನಲ್ಲಿ ಕಾಂಪೌಂಡರ್ ಮಾಡಿದ ಎಡವಟ್ಟಿನಿಂದಾಗಿ ಎಂಟು ತಿಂಗಳ ಮಗು ಬಲಿಯಾಗಿರುವ ಘಟನೆ ಜಮಖಂಡಿ ಬಳಿ ನಡೆದಿದೆ. ನಿನ್ನೆ ತಡರಾತ್ರಿ ಎಂಟು ತಿಂಗಳ ಮಗುವನ್ನು ಪೋಷಕರು ಕಿವಿ ನೋವು ಎಂದು ಮಕ್ಕಳ ಖಾಸಗಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಪಾನಮತ್ತನಾಗಿದ್ದ ಕಾಂಪೌಂಡರ್ ಕುಮಾರ್ ಮಗುವಿಗೆ ಮೇಲಿಂದ ಮೇಲೆ ಮೂರು ಇನ್‍ಜೆಕ್ಷನ್‍ಗಳನ್ನು ನೀಡಿದ್ದಾನೆ. ಇದರಿಂದ ಓವರ್ ಡೋಸೇಜ್ ಆಗಿ ಮಗು ಇಂದು ಬೆಳಗ್ಗೆ ಮೃತಪಟ್ಟಿದೆ. ಇದರಿಂದ ನೊಂದ ಮಗುವಿನ ಪೋಷಕರು, ಸಂಬಂಧಿಕರು ಆಸ್ಪತ್ರೆ ಮುಂದೆ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin