ಪಾರಂಪರಿಕ ಕಟ್ಟಡಕ್ಕೆ ಹಾನಿ ಮಾಡಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ರಂದೀಪ್

ಈ ಸುದ್ದಿಯನ್ನು ಶೇರ್ ಮಾಡಿ

dcf-radeep

ಮೈಸೂರು,ಏ.22- ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ಹಾನಿ ಉಂಟು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗವುದು ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ. ನಗರದಲ್ಲಿ 201 ಪಾರಂಪರಿಕ ಕಟ್ಟಡಗಳಿವೆ ಎಂದು ತಜ್ಞರ ಸಮಿತಿ ಪಟ್ಟಿ ಮಾಡಿದೆ. ಈ ಪೈಕಿ 55 ರಾಜ್ಯ ಸರ್ಕಾರದ ವಶದಲ್ಲಿ, 13 ಕೇಂದ್ರ ಸರ್ಕಾರದ ವಶದಲ್ಲಿ, 16 ಮೈಸೂರು ಮಹಾನಗರ ಪಾಲಿಕೆ, 9 ಮೈಸೂರು ವಿವಿ ಹಾಗೂ 111 ಕಟ್ಟಡಗಳು ಖಾಸಗಿ ವ್ಯಕ್ತಿಗಳ ಸುಪರ್ದಿಯಲ್ಲಿವೆ. ಈ ಕಟ್ಟಡಗಳನ್ನು ಸಂರಕ್ಷಿಸಿ ಜೋಪಾಲ ಮಾಡುವುದು ನಾಗರಿಕರ ಕರ್ತವ್ಯವಾಗಿದೆ ಎಂದಿದ್ದಾರೆ.
ಪಾರಂಪರಿಕ ಕಟ್ಟಡಗಳನ್ನು ತಜ್ಞರ ಸಮಿತಿಯ ಗಮನಕ್ಕೆ ತರದೆ ನೆಲಸಮಗೊಳಿಸಲಾಗುತ್ತಿದೆ . ಇದರಿಂದ ಮೈಸೂರಿನ ಪರಂಪರೆಗೆ ಧಕ್ಕೆಯಾಗುತ್ತದೆ. ಮುಂದಿನ ಪೀಳಿಗೆಗೂ ಈ ಕಟ್ಟಡಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ.ಪಾರಂಪರಿಕ ಕಟ್ಟಡಗಳ ಪಟ್ಟಿ ಅಧಿಕೃತ ಘೋಷಣೆಯಾಗಿ ಅಧಿಸೂಚನೆ ಹೊರಡಿಸುವವರೆಗೂ ಯಾವುದೇ ಪಾರಂಪರಿಕ ಕಟ್ಟಡಗಳನ್ನು ಕೆಡವುದಾಗಲಿ, ದುರಸ್ತಿ ಮಾಡುವುದಾಗಲಿ, ಹಾನಿಯುಂಟು ಮಾಡದಂತೆ ಅವರು ಸೂಚಿಸಿದ್ದಾರೆ. ಒಂದು ವೇಳೆ ರಿಪೇರಿಗೆ ಅನುಮತಿ ನೀಡಿದಲ್ಲಿ ಅಥವಾ ಕೆಡವಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin