ಪಾರಂಪಾರಿಕ ಕಟ್ಟಡಗಳ ದುಸ್ಥಿತಿ ಬಗ್ಗೆ ಗಮನ ಸೆಳೆದ ಕಲಾವಿದರು

ಈ ಸುದ್ದಿಯನ್ನು ಶೇರ್ ಮಾಡಿ

artist-6

ಒಂದು ಚಿತ್ರ ಸಾವಿರ ಪದಗಳಿಗೆ ಸಮ.. ಇದೇ ಪರಿಕಲ್ಪನೆಯೊಂದಿಗೆ ರೇಖಾಚಿತ್ರಗಳ ಮೂಲಕ ಫಿಲಿಪ್ಪೈನ್ಸ್‍ನ ಪಾರಂಪಾರಿಕ ಕಟ್ಟಡಗಳ ದುಸ್ಥಿತಿ ಮತ್ತು ಶಿಥಿಲಾವಸ್ಥೆ ಬಗ್ಗೆ ಕಲಾವಿದರು ಗಮನಸೆಳೆದು ಜಾಗೃತಿ ಮೂಡಿಸಿದರು. ಇವರು ರೇಖಾಚಿತ್ರ ಕಲಾವಿದರು. ಸ್ಥಳದಲ್ಲೇ ಯಥಾವತ್ ಚಿತ್ರಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರು.. ಇವರು ದ್ವೀಪರಾಷ್ಟ್ರ ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಜಮಾಯಿಸಿದ್ದರು.  ಇದಕ್ಕೆ ಕಾರಣವೂ ಇತ್ತು. ಈ ನಗರದ 220ಕ್ಕೂ ಹೆಚ್ಚು ಪಾರಂಪಾರಿಕ ವಿನ್ಯಾಸದ ನಿವಾಸಗಳು, ಸಾಂಸ್ಕತಿಕ ಸೌಧಗಳು ಮತ್ತು ಪ್ರಾಚೀನ ಕಟ್ಟಡಗಳು ದುಸ್ಥಿತಿಗೆ ತಲುಪಿರುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಇವರ ಉದ್ದೇಶ.

arti-7

ಫಿಲಿಪೈನ್ಸ್‍ನ ನಗರ ರೇಖಾಚಿತ್ರ ಕಾರರ ಸಮೂಹದೊಂದಿಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಉತ್ಸಾಹಿಗಳು ತಿಂಗಳಿಗೊಮ್ಮೆ ರಾಜಧಾನಿ ಮನಿಲಾದ ಪಾರಂಪಾರಿಕ ತಾಣಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ಸೌಧಗಳು, ಗೋಪುರಗಳು ಮತ್ತು ಕಟ್ಟಡಗಳ ಯಥಾವತ್ ಚಿತ್ರಗಳನ್ನು ಬಿಡಿಸುತ್ತಾರೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ನೆಲಸಮವಾಗುವುದಕ್ಕೆ ಮುನ್ನ ಅವುಗಳ ದುರಾವಸ್ಥೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಸಂರಕ್ಷಿಸಲು ಈ ವಿಭಿನ್ನ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಅಕ್ಟೋಬರ್‍ನಿಂದ ಆರಂಭವಾಗಿರುವ ಈ ರೇಖಾಚಿತ್ರ ಜಾಗೃತಿ ಅಭಿಯಾನ ಹೊಸ ವರ್ಷದ ಆರಂಭದವರೆಗೆ.

arti-9

Facebook Comments

Sri Raghav

Admin