ಪಾರ್ಕಿಂಗ್ ವಿಚಾರದಲ್ಲಿ ಕ್ರಿಕೆಟಿಗ ಶಮಿ ಮೇಲೆ ಹಲ್ಲೆ ನಡೆಸಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Shami-01

ಕೋಲ್ಕತ್ತಾ, ಜು.18- ಪಾರ್ಕಿಂಗ್ ವಿಚಾರದಲ್ಲಿ ನಡೆದ ಜಗಳದ ವೇಳೆ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಮೇಲೆ ಹಲ್ಲೆ ನಡೆಸಿದ್ದ ಮೂವರು ಯುವಕರನ್ನು ಜಾದವನಗರ್ ಪೊಲೀಸರು ಬಂಧಿಸಿದ್ದಾರೆ. ಜಯಂತ್ ಸರ್ಕಾರ್, ಸ್ವರೂಪ್ ಸರ್ಕಾರ್ ಹಾಗೂ ಶಿವಾ ಪರಾಮಾನಿಕ್ ಬಂಧಿತರು. ವೆಸ್ಟ್ಇಂಡೀಸ್ ಪ್ರವಾಸ ಮುಗಿಸಿಕೊಂಡು ಸ್ವದೇಶಕ್ಕೆ ಮರಳಿರುವ ಶಮಿ ನಿನ್ನೆ ಕಟ್ಜು ನಗರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಬಳಿ ಕಾರನ್ನು ಪಾರ್ಕಿಂಗ್ ಮಾಡುವಾಗ ಅಲ್ಲಿಗೆ ಬೈಕ್ನಲ್ಲಿ ಬಂದ ಮೂವರು ಯುವಕರು ಶಮಿ ಬಳಿ ಅಸಭ್ಯವಾಗಿ ವರ್ತಿಸಿದ್ದೇ ಅಲ್ಲದೆ ಹಲ್ಲೆಯನ್ನು ಮಾಡಿದ್ದರು.

ಪಾರ್ಕಿಂಗ್ ಸಮಯದಲ್ಲಿ ಮೊಹಮ್ಮದ್ ಶಮಿ ಮೇಲೆ ಅಸಭ್ಯವಾಗಿ ವರ್ತಿಸಿದ್ದೇ ಅಲ್ಲದೆ ಶಮಿ ಅವರ ಮನೆಗೂ ನುಗ್ಗಲು ಪ್ರಯತ್ನಿಸಿದ್ದರು. ಈ ವೇಳೆ ಶಮಿ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಯುವಕರು ಅಲ್ಲಿಂದ ಪರಾರಿಯಾಗಿದ್ದರು. ಈ ಎಲ್ಲ ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು , ದೂರು ದಾಖಲಿಸಿಕೊಂಡ ಪೊಲೀಸರು ಮೂವರನ್ನು ಯುವಕರನ್ನು ಬಂಧಿಸಿದ್ದಾರೆ. ಬಂಧಿತ ಯುವಕರ ಮೇಲೆ ಅಪರಾಧ ಕೃತ್ಯ ಹಾಗೂ ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಜದವಾಪುರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin