ಪಾರ್ವತಮ್ಮನವರ 11 ದಿನದ ವಿಧಿವಿಧಾನಗಳನ್ನು ನೆರವೇರಿಸಿದ ಮಕ್ಕಳು

ಈ ಸುದ್ದಿಯನ್ನು ಶೇರ್ ಮಾಡಿ

parvatamma-Shivarajkuamr--0

ಬೆಂಗಳೂರು, ಜೂ.11-ವರನಟ ಡಾ.ರಾಜ್‍ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್‍ಕುಮಾರ್ ಅವರು ವಿಧಿವಶರಾಗಿ 11 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಅವರ ಸಮಾಧಿ ಬಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಪುಣ್ಯತಿಥಿ ಅಂಗವಾಗಿ ಸಮಾಧಿ ಬಳಿ ಪೂಜೆ ಸಲ್ಲಿಸಲು ಹಲವು ಬಗೆಯ ತಿಂಡಿ-ತಿನಿಸುಗಳನ್ನು ಇಟ್ಟು ಪಾರ್ವತಮ್ಮ ಅವರ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ ಪುತ್ರರಾದ ಶಿವರಾಜ್‍ಕುಮಾರ್, ರಾಘವೇಂದ್ರರಾಜ್‍ಕುಮಾರ್ ಹಾಗೂ ಪುನೀತ್‍ರಾಜ್‍ಕುಮಾರ್ ವಿಧಿವಿಧಾನಗಳನ್ನು ನೆರವೇರಿಸಿದರು.

ಸದಾಶಿವ ನಗರದ ಅವರ ಮನೆಯಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಇಂದಿನ ಪುಣ್ಯತಿಥಿ ವೇಳೆ ಹಲವಾರು ಚಿತ್ರರಂಗದ ಗಣ್ಯರು, ಕಲಾವಿದರು ಸೇರಿದಂತೆ ಬಹಳಷ್ಟು ಮಂದಿ ಹಾಜರಿದ್ದರು.  ಕನ್ನಡ ಚಿತ್ರರಂಗದಲ್ಲಿ ಹಿರಿಯ ನಿರ್ಮಾಪಕಿಯಾಗಿಯೂ ಕೆಲಸ ನಿರ್ವಹಿಸಿರುವ ಪಾರ್ವತಮ್ಮ ಅವರಿಗೆ ಸಮಾಧಿ ಸ್ಥಳದಲ್ಲಿ ಹಾಗೂ ಮನೆಯಲ್ಲಿ ಸಂಬಂಧಿಕರು ಹಾಗೂ ಚಿತ್ರರಂಗದವರು ಪೂಜೆ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin