ಪಾಲಿಶ್ ನೆಪದಲ್ಲಿ 1.50 ಲಕ್ಷ ಮೌಲ್ಯದ 2 ಮಾಂಗಲ್ಯ ಸರ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

gold--palish

ದಾವಣಗೆರೆ, ಅ.3-ಚಿನ್ನಾಭರಣ ಪಾಲಿಷ್ ಮಾಡುವ ನೆಪದಲ್ಲಿ ಮನೆ ಬಾಗಿಲಿಗೆ ಬಂದ ಅಪರಿಚಿತರು ಅತ್ತೆ-ಸೊಸೆಯನ್ನು ನಂಬಿಸಿ ಹಾಡಹಗಲೇ ಸುಮಾರು ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದೊಡ್ಡಬಾಲೆ ಗ್ರಾಮದ ತೇರುಬೀದಿ ನಿವಾಸಿ ಸುನೀತಾ ವಂಚನೆಗೊಳಗಾದ ಗೃಹಿಣಿ.

ಘಟನೆ ವಿವರ:

ಮನೆಯ ಬಾಗಿಲಿಗೆ ಅಪರಿಚಿತರು ಬೆಳ್ಳಿ, ಬಂಗಾರವನ್ನು ಪಾಲಿಷ್ ಮಾಡುವುದಾಗಿ ಹೇಳಿ ಯಾವುದೇ ತಾಮ್ರದ ವಸ್ತು ನೀಡುವಂತೆ ಸುನೀತಾಗೆ ಹೇಳಿದ್ದಾರೆ. ಇದನ್ನು ನಂಬಿದ ಸುನೀತಾ ಮತ್ತು ಆಕೆಯ ಅತ್ತೆ ತಾಮ್ರದ ಚೆಂಬನ್ನು ಕೊಟ್ಟಿದ್ದಾರೆ. ಚೆಂಬನ್ನು ಪಾಲಿಶ್ ಮಾಡುವ ನೆಪದಲ್ಲಿ ಅತ್ತೆ-ಸೊಸೆಗೆ ಮಂಕು ಬೂದಿ ಎರಚಿದ್ದಾರೆ.
ಬಳಿಕ ಸುನೀತಾ ಮನೆಯೊಳಗೆ ಹೋಗಿ ಬೀರುವಿನಲ್ಲಿದ್ದ 30 ಗ್ರಾಂ ತೂಕದ 70 ಸಾವಿರ ರೂ. ಮೌಲ್ಯದ ಮಾಂಗಲ್ಯ ಸರವನ್ನು ಪಾಲಿಶ್ ಮಾಡಲು ತಂದುಕೊಟ್ಟಿದ್ದಾರೆ. ಮಾಡುವಂತೆ ನಂಬಿಸಿದ್ದಾರೆ. ಈ ನಡುವೆ ಸುನೀತಾ ಅತ್ತೆ ಸಹ ತನ್ನ ಕೊರಳಿನಲ್ಲಿದ್ದ 35 ಗ್ರಾಂ ತೂಕದ 62 ಸಾವಿರ ರೂ. ಮೌಲ್ಯದ ಸರವನ್ನೂ ಬಿಚ್ಚಿಕೊಟ್ಟಿದ್ದಾರೆ.ಇದನ್ನೇ ಬಂಡವಾಳವನ್ನಾಗಿಸಿಕೊಂಡು ದುಷ್ಕರ್ಮಿಗಳು ಮಾಂಗಲ್ಯಸರ ಹಾಗೂ ಸರವನ್ನು ತಮ್ಮ ಬ್ಯಾಗ್‍ನಲ್ಲಿ ಹಾಕಿಕೊಂಡು ನಿಮ್ಮ ಚಿನ್ನಾಭರಣವನ್ನು ಕುಕ್ಕರ್‍ನಲ್ಲಿ ಹಾಕಿದ್ದೇನೆ. 5 ನಿಮಿಷ ಒಲೆ ಮೇಲೆ ಇಟ್ಟು ತೆಗೆಯುವಂತೆ ಹೇಳಿ ಖದೀಮರು ಪರಾರಿಯಾಗಿದ್ದಾರೆ. ತದನಂತರ ಕುಕ್ಕರ್ ತೆಗೆಯುತ್ತಿದ್ದಂತೆ ಕಳ್ಳರ ನಿಜ ಬಣ್ಣ ಬಯಲಾಗಿದ್ದು, ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.ಈ ಸಂಬಂಧ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin