ಪಾಶ್ಚಾತ್ಯ ಅನುಕರಣೆಯ ವರ್ಷಾಚರಣೆ ಬೇಕೆ ?

ಈ ಸುದ್ದಿಯನ್ನು ಶೇರ್ ಮಾಡಿ

new
ಕಾವ್ಯ, ರಾಮನಗರ

ನಮ್ಮ ಸನಾತನ ಧರ್ಮದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭದ ದಿನ. ಹೊಸ ವರುಷವಾಗಿ ಯುಗಾದಿಯ ಆಚರಣೆಗೂ, ಡಿಸೆಂಬರ್ 31ರ ರಾತ್ರಿಯ ಆಚರಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದರಲ್ಲಿ ಭಾರತೀಯ ಸಂಸ್ಕತಿಯ ಸೊಗಡಿದ್ದರೆ, ಇನ್ನೊಂದರಲ್ಲಿ ಪಾಶ್ಚಾತ್ಯ ಸಂಸ್ಕತಿಯ ವಿಲಾಸಿ ಸೋಗಲಾಡಿತನವಿದೆ. ಭಾರತೀಯ ಸಂಸ್ಕತಿಯ ಮೇಲೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕತಿಯ ಸವಾರಿ ಅತಿಯಾಗುತ್ತಿದೆ. ಪಾಶ್ಚಾತ್ಯ ಸಂಸ್ಕತಿಯು ಸನಾತನ ಸಂಸ್ಕತಿಗೆ ಪೋಷಕವಾಗಬೇಕೇ ವಿನಾ ಮಾರಕವಾಗಬಾರದು. ಇಂದು ನಾವು ಪಾಶ್ಚಾತ್ಯರ ಒಳ್ಳೆಯ ರೂಢಿಗಳನ್ನು ಸ್ವೀಕರಿಸುವ ಬದಲು ಅವರ ಕೆಟ್ಟ ಅಂಶಗಳನ್ನು ಮಾತ್ರ ಅನುಸರಿಸುತ್ತಿದ್ದೇವೆ. ಈ ನೆಲದಲ್ಲಿ ಹುಟ್ಟಿ. ಬೆಳೆದು ಅರಳಿದ ಬಹುತೇಕ ಸಂಪ್ರದಾಯಗಳು, ಆಚರಣೆಗಳು ಮನುಷ್ಯನನ್ನು ಉತ್ತಮ ಸಂಸ್ಕಾರದೆಡೆಗೆ, ಉನ್ನತಿಯೆಡೆಗೆ ಕೊಂಡೊಯ್ಯುತ್ತವೆ. ಆದರೆ ನಾವಿಂದು ಪಾಶ್ಚಾತ್ಯ ಆಚರಣೆಗಳನ್ನು ಕೇವಲ ಕುರುಡಾಗಿ ಅನುಸರಿಸುತ್ತಿದ್ದೇವೆ. ಇದರಿಂದಲೇ ಅಧಃಪತನದತ್ತ ಜಾರುತ್ತಿದ್ದೇವೆ.

new-2
ಉದಾಹರಣೆಗೆ ಡಿ.31ರ ರಾತ್ರಿ ಈ ದೇಶದ ಬಹುತೇಕ ಜನರು ತಿಂದು, ಕುಡಿದು, ಕುಪ್ಪಳಿಸಿ ಸಂತೋಷ ಪಡುತ್ತಾರೆ. ಈ ರೀತಿಯ ಸಂತೋಷದ ಭರದಲ್ಲಿ, ಕುಡಿದ ಅಮಲಿನಲ್ಲಿ ಮಧ್ಯರಾತ್ರಿ ರಸ್ತೆ ಅಪಘಾತಗಳಾಗಿ ಎಷ್ಟೋ ಜನ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಸನಾತನ ಧರ್ಮದ ಪ್ರಕಾರ ಯುಗಾದಿಯು ಹೊಸ ವರ್ಷದ ಆರಂಭದ ದಿನ. ಯುಗಾದಿ ಎಂದರೆ ಸೃಷ್ಟಿಯ ಪ್ರಾರಂಭದ ದಿನ, ಯುಗದ ಆರಂಭದ ದಿನ, ಹೊಸ ಸಂವತ್ಸರದ ಮೊದಲ ದಿನ. ಆದ್ದರಿಂದ ಅದನ್ನು ಯುಗಾದಿ ಎನ್ನುತ್ತೇವೆ.

ಬ್ರಹ್ಮನು ಚೈತ್ರ ಶುದ್ಧ ಪ್ರಥಮದಂದು ಸೂರ್ಯೋದಯ ಸಮಯಕ್ಕೆ ಸರಿಯಾಗಿ, ಸಮಗ್ರವಾಗಿ ಈ ಜಗತ್ತನ್ನು ಸೃಷ್ಟಿಸಿದನೆಂದು ಪುರಾಣಗಳು ಹೇಳುತ್ತವೆ. ಅದಕ್ಕಾಗಿ ಆ ದಿನ ನಮಗೆ ಹೊಸ ವರುಷದ ಆರಂಭದ ಹಬ್ಬದ ದಿನವೆನಿಸಿದೆ. ಉಂಡಿದ್ದೇ ಯುಗಾದಿ, ಮಿಂಚಿದ್ದೇ ದೀಪಾವಳಿ, ಹೊಟ್ಟೆಗಿಲ್ಲದೇ ಏಕಾದಶಿ ಎಂಬುದಾಗಿ ಜನಪದರು ಯುಗಾದಿಯ ಬಗ್ಗೆ ಹಾಡಿದ್ದಾರೆ. ರೈತ ಬಾಂಧವರಿಗೆ ಈ ಹಬ್ಬದ ಸಮಯದಲ್ಲಿ ಕೃಷಿ ಕೆಲಸಕ್ಕೆ ಬಿಡುವಿರುತ್ತದೆ. ಈ ದಿನದವರೆಗೂ ಅವರು ಬೆಳೆದ ಕೃಷಿ ಧಾನ್ಯಗಳಿಂದ ಮನೆ ಮನ ತುಂಬಿ ಸಂತಸದಿಂದಿರುತ್ತಾರೆ.  ಈ ಸಂದರ್ಭದಲ್ಲಿ ಹೊಸ ಮಳೆಗಳು ಕೂಡಿಕೊಳ್ಳುತ್ತವೆ. ಅದಕ್ಕೆ ಬೇಸಾಯಗಾರರು ಹೊಲದಲ್ಲಿನ ಕೆಲಸ ನವೀಕರಿಸಿಕೊಳ್ಳುವ ಈ ದಿನವನ್ನು ಹೆಚ್ಚು ಬಳಸುತ್ತಾರೆ. ಚಾಂದ್ರಮಾನ ಕಾಲ ಗಣನೆಯ ಪ್ರಕಾರ ಮೇಷ ಸಂಕ್ರಮಣಕ್ಕೆ ಯುಗಾದಿ ಬರುತ್ತದೆ. ಅದನ್ನೇ ವಿಷು, ಬಿಸು, ಪರ್ಬ ಎಂದೆಲ್ಲಾ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಈ ಬಿಸು ಪರ್ಬದ ದಿವಸ ಒಕ್ಕಲಿಗರು ಹಾಗೂ ಧನಿಕರಲ್ಲಿ ಉಳುವ ಭೂಮಿಯನ್ನು ಬಿಟ್ಟು ಕೊಡುವ ಹಾಗೂ ನವೀಕರಿಸುವ ಪದ್ಧತಿಯಿತ್ತು. ಸಾಹುಕಾರನ ಸಾಲ ಸಂದಾಯ ಮಾಡಿ ರೈತ ಋಣಮುಕ್ತನಾಗುವ ಹೊಸ ವರ್ಷದ ಹಬ್ಬವಿದು. ಯುಗಾದಿಯಂದು ಸಂಜೆ ಎಲ್ಲರೂ ಊರ ದೇವಾಲಯದಲ್ಲಿ ಸೇರಿ ಪಂಚಾಂಗ ಶ್ರವಣ ಮಾಡಿ, ಮುಂದಿನ ವರ್ಷದ ಮಳೆ-ಬೆಳೆ ಇತರ ಪಾಲಗಳನ್ನು ತಿಳಿಯುತ್ತಾರೆ.

ಯುವ ಜನತೆ ಕ್ರೀಡೆ ಮತ್ತು ಸಾಂಸ್ಕತಿಕ ಉತ್ಸವಗಳಲ್ಲಿ ಭಾಗವಹಿಸುತ್ತ ಮನರಂಜನೆ ಒದಗಿಸುತ್ತಾರೆ. ಆದ್ದರಿಂದ ಮನಸ್ಸನ್ನು ಕೆರಳಿಸುವ ಡಿ.31ರ ರಾತ್ರಿಯ ಹೊಸ ವರ್ಷಾಚರಣೆಗಿಂತ ಮನಸ್ಸನ್ನು ಅರಳಿಸುವ ಯುಗಾದಿಯಿಂದ ಹೊಸ ವರ್ಷಾಚರಣೆ ಉತ್ತಮ.
ಜಗತ್ತಿನಲ್ಲಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನದಂದು ಹೊಸ ವರ್ಷ ಆಚರಣೆ ಮಾಡುತ್ತಾರೆ. ಬ್ಯಾಬಿಲೋನಿಯಾದಲ್ಲಿ ಮೇಷ ಸಂಕ್ರಾಂತಿ ಹತ್ತಿರದ ಅಮಾವಾಸ್ಯೆಯಂದು ಹೊಸ ವರ್ಷ ಆಚರಿಸಲಾಗುತ್ತಿತ್ತು. ಆಸ್ಟ್ರೇಲಿಯಾದಲ್ಲಿ ತುಲಾ ಸಂಕ್ರಾಂತಿಯ ಸಮೀಪದ ಅಮಾವಾಸ್ಯೆ ದಿನದಂದು ಹೊಸ ವರ್ಷ ಪ್ರಾರಂಭವಾಗುತ್ತದೆ. ಈಜಿಪ್ಟಿಯನ್ನರಿಗೆ, ಪರ್ಷಿಯನ್ನರಿಗೆ ತುಲಾ ಸಂಕ್ರಾಂತಿಯಂದು ಗ್ರೀಕರಿಗೆ ಮಕರ ಸಂಕ್ರಾಂತಿಯಂದು ಹೊಸ ವರ್ಷ ಆರಂಭವಾಗುತ್ತದೆ. ಮಹಮ್ಮದೀಯರು ಚಂದ್ರಮಾನ ಪದ್ಧತಿಯನ್ನು ಅನುಸರಿಸುತ್ತಾರೆ.
ಅದೇ ರೀತಿ ಕ್ರೈಸ್ತರಿಗೆ ಜ.1ರಂದು ಹೊಸ ವರ್ಷ ಆರಂಭವಾಗುತ್ತದೆ. ಜ.1ರಂದು ಹೊಸ ವರ್ಷ ಆಚರಣೆ ವೈಜ್ಞಾನಿಕವಾದುದಲ್ಲ. ಹಿಂದೆ ಅವರೂ ಮಾ.1ರಂದು ಹೊಸ ವರ್ಷ ಆಚರಿಸುತ್ತಿದ್ದರು.

1582ರಲ್ಲಿ ಪೋಪ್ ಆಗಿದ್ದ 13ನೆ ಗ್ರೆಗೊರಿ ತನ್ನ ಗ್ರೆಗೋರಿಯನ್ ಕ್ಯಾಲೆಂಡರ್ ಪರಿಚಯಿಸಿದರು. ಇದಕ್ಕೂ ಮುನ್ನ ಯುರೋಪಿಯನ್ನರು ಜೂಲಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುತ್ತಿದ್ದರು. ಕ್ರಿಸ್ತಪೂರ್ವ 46ರಲ್ಲಿ ರೋಮ್ ಚಕ್ರವರ್ತಿ ಮೊದಲ ಬಾರಿಗೆ ಅನುಷ್ಠಾನಗೊಳಿಸಿದ್ದ ಪ್ರಾಚೀನ ಕ್ಯಾಲೆಂಡರ್ ಅದಾಗಿತ್ತು. ಈ ಕ್ಯಾಲೆಂಡರ್‍ನಲ್ಲಿ ಸೌರ ವರ್ಷದ ಅವಧಿಯನ್ನು ತಪ್ಪಾಗಿ ಲೆಕ್ಕಾಚಾರ ಮಾಡಲಾಗಿತ್ತು. ಹೀಗಾಗಿ ಗ್ರೆಗೋರಿಯನ್ ಕ್ಯಾಲೆಂಡರ್‍ನನ್ನು ಕ್ಯಾಥೋಲಿಕ್ ಕ್ರೈಸ್ಟರು ಅನುಸರಿಸಿದರೂ ಇದಕ್ಕೆ ಪ್ರೊಟೆಸ್ಟೆಂಟ್ ಕ್ರೈಸ್ತರು ವಿರೋಧ ವ್ಯಕ್ತಪಡಿಸಿದರು.

new-1
ಹೊಸ ವರ್ಷವನ್ನು ಯಾವಾಗ ಬರಮಾಡಿಕೊಳ್ಳಬೇಕು ಎಂಬ ಗೊಂದಲದ ನಡುವೆಯೇ ಪ್ರೋಪ್ ಗ್ರೆಗೋರಿಯನ್ ಅನುಯಾಯಿಗಳು ಮತ್ತೊಂದು ವಾದ ಸಿದ್ಧಾಂತ ಮಂಡಿಸಿದರು. ದೇವ ಮಾನವ ಏಸು ಕ್ರಿಸ್ತ ಮಹಾಪುರುಷ. ಆತ ಧರೆಗೆ ಅವತರಿಸಿದ ಡಿ.25ರಂದು ಹೊಸ ವರ್ಷ ಆಚರಣೆ ಸೂಕ್ತ ಎಂದು ಪ್ರತಿಪಾದಿಸಿದರು. 12 ತಿಂಗಳ ಅವಧಿ ಮುಗಿಯಲು ಇನ್ನು ಆರು ದಿನ ಇರುವಾಗ ಜ.1ರಂದು ನವ ವರುಷ ಬರಮಾಡಿಕೊಳ್ಳುವುದು ಸೂಕ್ತ ಎಂದು ನಿರ್ಧರಿಸಲಾಯಿತು.

ಪಾಶ್ಚಾತ್ಯರಲ್ಲೂ ಕೆಲವರು ವಿಚಾರವಂತರಿದ್ದರು. ಅವರು ಮಾ.1ರಂದು ಹೊಸ ವರ್ಷ ಆಚರಿಸುವುದು ಸೂಕ್ತವಾಗಿದೆ. ಅದನ್ನು ದಯವಿಟ್ಟು ಬದಲಾಯಿಸಬೇಡಿ ಎಂಬುದಾಗಿ ಮನವಿ ಮಾಡಿದರು. ಒಂದು ವೇಳೆ ಬದಲಾಯಿಸಬೇಕಾದರೆ ಭಾರತೀಯರ ಹೊಸ ವರ್ಷವಾದ ಯುಗಾದಿಯಿಂದ ಇಡೀ ಪ್ರಕೃತಿಯೇ ಹೊಸತನದಿಂದ ಕಂಗೊಳಿಸುತ್ತದೆ.

new-4
ಪಾಢ್ಯದ ದಿನದಂದು ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾರೆ ಮತ್ತು ವಸಂತ ಋತು ಪ್ರಾರಂಭ ಆಗುತ್ತದೆ. ಇಡೀ ಪ್ರಕೃತಿಯೇ ಹೊಸ ವರ್ಷವನ್ನು ಆಚರಿಸುವ ಸಂದರ್ಭ ಅಂದರೆ ಯುಗಾದಿ. ಆದ್ದರಿಂದ ಹೊಸ ವರ್ಷವನ್ನು ಏಪ್ರಿಲ್‍ನಲ್ಲೇ ಆಚರಿಸಿ ಎಂಬುದಾಗಿ ಪಾಶ್ಚಾತ್ಯ ಚಿಂತಕರು, ಬುದ್ಧಿಜೀವಿಗಳು ಹೇಳಿದ್ದಾರೆ. ಆಗ ಸಾಂಪ್ರದಾಯಿಕ ಕ್ರಿಶ್ಚಿಯನ್ನರು ಯಾರು ಏಪ್ರಿಲ್ ತಿಂಗಳನ್ನು ಹೊಸ ವರ್ಷವೆಂದು ಆಚರಿಸುತ್ತಾರೋ ಅವರೆಲ್ಲಾ ಮೂರ್ಖರು ಎಂಬುದಾಗಿ ಹೇಳಿದರು. ಆದ್ದರಿಂದ ಏಪ್ರಿಲ್ ಒಂದು ಮೂರ್ಖರ ದಿನ ಎಂಬುದಾಗಿ ಆಚರಣೆಗೆ ಬಂತು. ಹೀಗೆ ನಮ್ಮೆಲ್ಲರನ್ನು ಮೂರ್ಖರನ್ನಾಗಿ ಮಾಡಿದ ಏಪ್ರಿಲ್ ಒಂದನ್ನು ಮೂರ್ಖರ ದಿನಾಚರಣೆ ಎಂದು ಆಚರಿಸಿ ನಾವು ನಿಜವಾದ ಮೂರ್ಖರು ಎಂದು ಜಗತ್ತಿಗೆ ತೋರಿಸಿಕೊಟ್ಟೆವು. ನಾವು ಆತ್ಮವಿಸ್ತೃತರಾಗಿದ್ದರ ಪರಿಣಾಮವಾಗಿ ಈ ದೇಶದ ಮೇಲೆ ನಮ್ಮ ಧರ್ಮದ ಮೇಲೆ, ಸಂಸ್ಕತಿ, ಇತಿಹಾಸ, ಪರಂಪರೆ, ಸಂಪ್ರದಾಯಗಳ ಮೇಲೆ ಪಾಶ್ಚಾತ್ಯರ ಆಕ್ರಮಣ ನಡೆಯಿತು. ಆದರೆ ನಮಗೆ ಪಾಶ್ಚಾತ್ಯರ ಅನುಕರಣೆ ಮಾಡುವುದರಲ್ಲೇ ತೃಪ್ತಿ, ಅದರಲ್ಲೇ ಆನಂದ. ಇದಕ್ಕೆ ಹೊಸ ವರ್ಷದ ಆಚರಣೆಯೂ ಹೊರತಾಗಿಲ್ಲ.

Facebook Comments

Sri Raghav

Admin