ಪಾಸ್ಪೋರ್ಟ್’ಗಾಗಿ ಸುಷ್ಮಾಸ್ವರಾಜ್ ಸಹಿ ಫೋರ್ಜರಿ ಮಾಡಿದ್ದ ಸಹೋದರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

police

ಬೆಂಗಳೂರು, ಏ.22-ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರುಗಳ ನಕಲಿ ಲೆಟರ್‍ಹೆಡ್ ತಯಾರಿಸುತ್ತಿದ್ದ ಸೋದರರಿಬ್ಬರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಸೋದರರಿಂದ ಪ್ರಧಾನಿ ನರೇಂದ್ರ ಮೋದಿ, ಸೆಂಟ್ರಲ್ ವಿಜೆಲೆನ್ಸ್ ಕಮಿಷನ್, ಮಿನಿಸ್ಟ್ರಿ ಆಫ್ ಇನ್‍ಫಾರ್‍ಮೇಷನ್, ಬ್ರಾಡ್‍ಕಾಸ್ಟಿಂಗ್, ಸಚಿವ ಮನೀಶ್‍ತಿವಾರಿ, ಮಹಾರಾಷ್ಟ್ರ ಮುಖ್ಯಮಂತ್ರಿ, ಕೇಂದ್ರದ ಗೃಹ ಸಚಿವ ರಾಜನಾಥ್‍ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಹಣಕಾಸು ಸಚಿವ ಅರುಣ್‍ಜೇಟ್ಲಿ ಅವರ ಹೆಸರಿನ ಸಹಿ ಇರವ ನಕಲಿ ಲೆಟರ್‍ಹೆಡ್, ವಿಸಿಟಿಂಗ್ ಕಾರ್ಡ್‍ಗಳ ಲೆಟರ್‍ಗಳು, ಇವುಗಳನ್ನು ತಯಾರಿಸಲು ಉಪಯೋಗಿಸಿದ ಲ್ಯಾಪ್‍ಟಾಪ್, ಕಲರ್ ಪ್ರಿಂಟರ್, ಪ್ರಿಂಟ್ ಹಾಕಿ ಸೃಷ್ಟಿಸಿರುವ ಸರ್ಕಾರದ ಅಶೋಕ ಸ್ತಂಭದ ಮೋಗೋಗಳನ್ನು ವಶಪಡಿಸಿಕೊಳ್ಳಲಾಗಿದೆ.ಜೆ.ಪಿ.ನಗರ 1ನೇ ಹಂತ ಜಿ.ಎಂ.ಗಾರ್ಡನ್ ನಿವಾಸಿಗಳಾದ ಸೂರ್ಯರೋಷನ್ ಅಲಿಯಾಸ್ ಇಮ್ರಾನ್.ಐ (21) ಮತ್ತು ಆರ್ಯರೋಷನ್ ಅಲಿಯಾಸ್ ಇಮ್ತಿಯಾಜ್.ಐ(27) ಬಂಧಿತ ಸೋದರರು.ಸೂರ್ಯ ದ್ವಿತೀಯ ಪಿಯುಸಿವರೆಗೆ ಓದಿದ್ದು, ವೆಬ್‍ಡಿಸೈನಿಂಗ್ ಸೇರಿದಂತೆ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್‍ಗಳನ್ನು ಮಾಡಿಕೊಂಡಿದ್ದರೆ, ಆರ್ಯ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿದ್ದು, ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದಾನೆ ಎಂದು ಸೋದರರ ಬಂಧನ ಕುರಿತು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದರು.

ಸೋದರರಿಬ್ಬರು 2012ರಲ್ಲಿ ಪಾಸ್ ಪೋರ್ಟ್ ಗೆ ಅರ್ಜಿಸಲ್ಲಿಸಿದ್ದು, ಜನನ ಪ್ರಮಾಣ ಪತ್ರ ಮತ್ತು ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯಲ್ಲಿ ಹಳೆ ಹೆಸರುಗಳಿದ್ದು, ಅರ್ಜಿಯಲ್ಲಿ ಬೇರೆ ಹೆಸರುಗಳಿದ್ದರಿಂದ ಇವರ ಅರ್ಜಿ ತಿರಸ್ಕರವಾಗಿತು . ನಂತರ ಕಳೆದ ಮಾರ್ಚ್ ತಿಂಗಳಲ್ಲಿ ಮತ್ತೆ ಅರ್ಜಿ ಸಲ್ಲಿಸಿದ ಸೋದರರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಲೆಟರ್ ಹೆಡ್ ಸಹಿಯಿರುವ ಶಿಫಾರಸು ಪತ್ರ ಹಾಗೂ ಸುಷ್ಮಾ ಅವರ ಪಿಎಸ್ ಸತೀಶ್‍ಚಂದರ್ ಗುಪ್ತ ಅವರ ಶಿಫಾರಸು ಪತ್ರ ಸಲ್ಲಿಸಿದ್ದರು ಎಂದು ನಿಂಬಾಳ್ಕರ್ ತಿಳಿಸಿದರು.ನಕಲಿ ಶಿಫಾರಸು ಪತ್ರದ ಬಗ್ಗೆ ಕೋರಮಂಗಲ ಠಾಣೆ ಇನ್ಸ್‍ಪೆಕ್ಟರ್ ಅಜಯ್‍ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.ಸೂರ್ಯರೋಷನ್ ಇಂಟರ್‍ನೆಟ್‍ಮೂಲಕ ವಿವಿಐಪಿಗಳ ಲೆಟರ್‍ಹೆಡ್, ಸಹಿ ಡೌನ್‍ಲೋಡ್ ಮಾಡಿ ನಕಲಿ ಲೆಟರ್‍ಹೆಡ್‍ಗಳನ್ನು ತಯಾರಿಸುತ್ತಿದ್ದು, ಅದಕ್ಕೆ ಅಣ್ಣ ಆರ್ಯರೋಷನ್ ಸಹಕಾರ ನೀಡಿದ್ದಾನೆ ಎಂದು ನಿಂಬಾಳ್ಕರ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin