‘ಪಿಂಕ್’ ಕೇವಲ ರೇಪ್ ಸ್ಟೋರಿ ಅಲ್ಲ : ಬಿಗ್ ಬಿ

ಈ ಸುದ್ದಿಯನ್ನು ಶೇರ್ ಮಾಡಿ

Pink

ನೀವ್ ಅಂದ ಕೊಂಡ ಹಾಗೆ ಪಿಂಕ್ ಕೇವಲ ರೇಪ್ ಕಥೆ ಅಲ್ಲ; ಈಗಿನ ಸನ್ನಿವೇಶ ಕುರಿತ ಸಿನಿಮಾ ಎಂದು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಖಚಿತಪಡಿಸಿದ್ದಾರೆ. ಸೂಜಿತ್ ಸರ್ಕಾರ್ ನಿರ್ದೇಶನದ ಪಿಂಕ್ ಸಿನಿಮಾ ಕಥೆ ಬಗ್ಗೆ ಹಬ್ಬಿರುವ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಗ್ ಬಿ ಇದು ಕೇವಲ ಅತ್ಯಾಚಾರ ಕುರಿತ ಕಥೆಯ ಸಿನಿಮಾ ಅಲ್ಲ. ಈಗಿರುವ ಪರಿಸ್ಥಿತಿ ಕುರಿತ ವಾಸ್ತವ ಚಿತ್ರವಾಗಿದೆ ಎಂದು ಹೇಳಿದ್ದಾರೆ. ಪಿಂಕ್ನಲ್ಲಿ ಬಚ್ಚನ್ ಸೀನಿಯರ್ ಅಡ್ವೊಕೇಟ್ ಪಾತ್ರ ಮಾಡಿದ್ದಾರೆ.  ಬಿ ಟಾನ್ನಲ್ಲಿ ಈ ಸಿನಿಮಾದ ಜೀನೇ ದೆ ಮುಜೆ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಎಬಿ ಮಾತನಾಡಿದರು. ಮೂವರು ಯುವತಿಯರು ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಲುಕುವ ಕಥೆಯೊಂದರ ಸುತ್ತ ಪಿಂಕ್ ಸುತ್ತುತ್ತದೆ. ಯುವತಿಯರ ತವಕ ತಲ್ಲಣಗಳನ್ನು ಈ ಚಿತ್ರದಲ್ಲಿ ವಾಸ್ತವವಾಗಿ ಚಿತ್ರೀಕರಿಸಲಾಗಿದೆಯಂತೆ. ಸೆಪ್ಟೆಂಬರ್ 16ರಂದು ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ಸ್ಪ್ಸೀ ಪನ್ನು, ಕೀರ್ತಿ ಕುಲ್ಹರಿ ಮತ್ತು ಆಂಡ್ರಿಯಾ ಟಾರಿಂಗ್ ಮುಖ್ಯ ಪಾತ್ರದಲ್ಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.