ಪಿಎಸ್’ಐ ಹುದ್ದೆಯ ಆಯ್ಕೆಗೆ ಬಂದಿದ್ದ ಅಭ್ಯರ್ಥಿ ಹೃದಯಾಘಾತದಿಂದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Police-002

ಗೌರಿಬಿದನೂರು, ನ.6- ಪುರ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎನ್.ಸುರೇಶ್‍ಕುಮಾರ್ ಬೆಂಗಳೂರಿನ ಕೋರಮಂಗಲದ ಪೆರೆಡ್ ಗ್ರೌಂಡ್‍ನಲ್ಲಿ ಪಿಎಸ್‍ಐ ಹುದ್ದೆಯ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದ ವೇಳೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ನಡೆದಿದ್ದೇನು: ಗೌರಿಬಿದನೂರು ಪುರ ಪೊ ಲೀಸ್ ಠಾಣೆಯಲ್ಲಿ ಒಂದೂವರೆ ವರ್ಷದಿಂದ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಪಿಎಸ್‍ಐ ಹುದ್ದೆಗೆ ಸರ್ವೀಸ್ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ನ.5 ರಂದು ಬೆಳಗ್ಗೆ ಬೆಂಗಳೂರು ಕೋರಮಂಗಲದ ಪೆರೇಡ್ ಗ್ರೌಂಡ್‍ನಲ್ಲಿ ನೇಮಕಾತಿ ನಡೆಯುತ್ತಿದ್ದ ದೈಹಿಕ ಸೆಲೆಕ್ಷನ್ ವೇಳೆ ಓಡುತ್ತಿರುವಾಗ ಎದೆ ನೋವಿನಿಂದ ಕುಸಿದು ಬಿದ್ದಿದ್ದಾನೆ.

ತಕ್ಷಣ ಮಡಿವಾಳ ಸೆಂಟ್ ಜÁನ್ಸ್ ಆಸ್ಪತ್ರೆಗೆ ಸೇರಿಸಲಾದರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮೃತ ಕೋಲಾರ ಜಿಲ್ಲೆಯ ಕಿತ್ತಂಡೂರು ಗ್ರಾಮದ ವಾಸಿಯಾಗಿದ್ದು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.  2008ರಲ್ಲಿ ಪೊಲೀಸ್ ಪೇದೆಯಾಗಿ ಇಲಾಖೆಗೆ ಪಾದಾರ್ಪಣೆ ಮಾಡಿದ ಸುರೇಶ್, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಎಸ್‍ಐ ಆಗಬೇಕೆಂಬ ಕನಸು ಹೊತ್ತಿದ್ದ ಸುರೇಶ್ ಕನಸು ನನಸಾಗುವಷ್ಟರಲ್ಲಿ ವಿಧಿವಶರಾಗಿದ್ದಾರೆ.

ಮೃತನ ಪಾರ್ಥೀವ ಶರೀರವನ್ನು ಗ್ರಾಮಾಂತರ ಠಾಣೆಯ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಮೃತನ ದರ್ಶನ ಪಡೆಯಲು ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರಿಂದ ನೂಕುನುಗ್ಗಲು ಉಂಟಾಯಿತು, ವಿಧಾನಸಭೆ ಉಪಸಭಾಧ್ಯಕ್ಷ ಎನ್.ಹೆಚ್.ಶಿವಶಂಕರರೆಡ್ಡಿ, ಪುರಸಭಾಧ್ಯಕ್ಷ ಖಲೀಂಉಲ್ಲಾ, ಉಪಾಧ್ಯಕ್ಷ ಆರ್.ಪಿ.ಗೋಪಿನಾಥ್, ತಹಸೀಲ್ದಾರ್  ಎಂ.ನಾಗರಾಜ್, ವೃತ್ತನಿರೀಕ್ಷಕ ಎಂ.ವಿ.ಶೇಷಾದ್ರಿ, ಎಸ್‍ಐಗಳಾದ ಅವಿನಾಶ್ , ನಯಾಜ್‍ಬೇಗ್, ಮಂಜುನಾಥ್ , ಸಿಬ್ಬಂದಿಗಳು, ಸಾರ್ವಜನಿಕರು, ವಿವಿದ ಪಕ್ಷಗಳ ಮುಖಂಡರುಗಳು ಮೃತನ ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ಕೋರಿದರು.

► Follow us on –  Facebook / Twitter  / Google+

Facebook Comments

Sri Raghav

Admin