ಪಿಒಎಸ್ ಯಂತ್ರಗಳ ಮೇಲಿನ ತೆರಿಗೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

POS-Machine

ನವದೆಹಲಿ ನ.29 : ಲೆಸ ಕ್ಯಾಶ್ , ಕ್ಯಾಶ್ ಲೆಸ್ ಬದಲಾವಣೆ ತರಲು ಮುಂದಾಗಿರುವ ಮೋದಿ ಸರ್ಕಾರ ಸಣ್ಣ ವ್ಯಾಪಾರಿಗಳೂ ಕೂಡ ಕ್ಯಾಶ್ ಲೆಸ್ ವ್ಯವಹಾರ ಮಾಡಲಿ ಎಂಬ ದೃಷ್ಟಿಯಿಂದ ಮತ್ತೊಂದು ಹೆಜ್ಜೆ ಇಟ್ಟಿದ್ದು  ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿಸುವ ಯಂತ್ರಗಳ (POS – Point of Sale Machine ) ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇದರಿಂದಾಗಿ ಈ ಯಂತ್ರಗಳ ಬೆಲೆ ಶೇಕಡ 16.5ರಷ್ಟು ಅಗ್ಗವಾಗಲಿದೆ. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ನಂತರ ಪಿಒಎಸ್ ಯಂತ್ರಗಳನ್ನು ವ್ಯಾಪಾರಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ.

‘ಮಾರ್ಚ್ 31ರವರೆಗೆ ಪಿಒಎಸ್ ಯಂತ್ರಗಳ ಮೇಲಿನ ಶೇಕಡ 12.5ರಷ್ಟು ಅಬಕಾರಿ ತೆರಿಗೆ, ಶೇಕಡ 4ರಷ್ಟು ವಿಶೇಷ ಹೆಚ್ಚುವರಿ ತೆರಿಗೆ ತೆರವು ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ. ತೆರಿಗೆ ಕಡಿತ ಮಾಡಿರುವುದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಮಸೂದೆ ಮಂಡಿಸಿದರು. ಶೇಕಡ 90ರಷ್ಟು ಪಿಒಎಸ್ ಯಂತ್ರಗಳನ್ನು ದೇಶ ಆಮದು ಮಾಕೊಳ್ಳುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin