ಪಿಗ್ಗಿ ಕಿರೀಟಕ್ಕೆ ಮತ್ತೊಂದು ಗರಿ

ಈ ಸುದ್ದಿಯನ್ನು ಶೇರ್ ಮಾಡಿ

sdggsdfga

ಬಾಲಿವುಡ್ ಖ್ಯಾತ ಅಭಿನೇತ್ರಿ ಮತ್ತು ಮಾಜಿ ಭುವನ ಸುಂದರಿ ಪ್ರಿಯಾಂಕ ಚೋಪ್ರಾ ಸುದ್ದಿಯ ಮೇಲೆ ಸುದ್ದಿ ಮಾಡುತ್ತಾ ಜಗದ್ವಿಖ್ಯಾತಳಾಗುತ್ತಿದ್ದಾಳೆ. ಮೊನ್ನೆ ನೀವು ಇದೇ ಬಾಕ್ಸ್‍ನಲ್ಲಿ ಪಿಗ್ಗಿ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ಯುನಿಸೆಫ್ ಗ್ಲೋಬಲ್ ಗುಡ್‍ವಿಲ್ ಅಂಬಾಸಿಡರ್ ಆಗಿ ಸುದ್ದಿ ಮಾಡಿದ್ದಳು. ಈಗ ಬಂದಿರುವ ಸುದ್ದಿ ಆಕೆಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂಥದ್ದು. ಐಎಂಡಿಬಿ ಬಹು ಪ್ರಸಿದ್ಧ ಖ್ಯಾತನಾಮರ ಪಟ್ಟಿಯಲ್ಲಿ ಪಿಸಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಹಾಲಿವುಡ್‍ನ ದಿಗ್ಗಜರಾದ ಜೆನ್ನಿಫರ್ ಅನಿಸ್‍ಟೊನ್, ಎಮ್ಮಾ ವ್ಯಾಟ್ಸನ್, ಲಿಯೋನಾರ್ಡೊ ಡಿ ಕ್ಯಾಪ್ರಿಯೋ, ಜಾಸಿ ಡೆಪ್, ಸ್ಕಾರ್ಲೆಟ್ ಜೋಹಾನ್ಸ್‍ಸನ್ ಮತ್ತಿತರರನ್ನು ಹಿಂದಿಕ್ಕಿರುವ ಪ್ರಿಯಾಂಕ 55 ಸ್ಥಾನದಲ್ಲಿದ್ದಾಳೆ. ಇದೇನು ಕಡಿಮೆ ಸಾಧನೆಯಲ್ಲ.

ಐಎಂಡಿಬಿ ಲಿಸ್ಟ್‍ನಲ್ಲಿ ಸ್ಥಾನ ಗಿಟ್ಟಿಸಲು ವಿಶ್ವದ ಅಗ್ರಮಾನ್ಯ ಖ್ಯಾತನಾಮರು ಹಾತೊರೆಯುತ್ತಾರೆ. ಅನೇಕಾನೇಕ ಸೂಪರ್ ಸ್ಟಾರ್‍ಗಳಿಗೆ ಈವರೆಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಭಾರತೀಯ ದೇಸಿ ಗರ್ಲ್ ಈಗ ಇಂಟರ್‍ನ್ಯಾಷನಲ್ ಸೂಪರ್ ಸ್ಟಾರ್ ಆಗಿದ್ದಾಳೆ. ಮೇಲಾಗಿ ಈ ಪಟ್ಟಿ ಸೇರಿದ ಮೊಟ್ಟ ಮೊದಲ ಭಾರತೀಯ ತಾರೆ ಎಂಬ ಕೀರ್ತಿಯೂ ಪಿಗ್ಗಿ ಕಿರೀಟಕ್ಕೆ ಕಳಸಪ್ರಾಯವಾಗಿದೆ. ಕೇವಲ ಒಂದೇ ಒಂದು ಅಮೆರಿಕನ್ ಟೆಲಿವಿಷನ್ ಮೂಲಕ ಸೀರಿಯಲಂ ಮೂಲಕ ಲೋಕ ವಿಖ್ಯಾತಳಾಗಿರುವ ಪ್ರಿಯಾಂಕ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಬೇವಾಚ್ ತೆರೆ ಕಾಣುವುದಕ್ಕೆ ಮೊದಲೇ ಈಕೆ ಹಾಲಿವುಡ್‍ನಲ್ಲಿ ಸುದ್ದಿಯ ದೊಡ್ಡ ಸದ್ದು ಮಾಡಿರುವುದು ಭಾರತೀಯರಿಗೆ ಹೆಮ್ಮೆ… ಇದು ಹೊಸ ವರ್ಷಕ್ಕೆ ಪಿಗ್ಗಿಗೆ ಲಭಿಸಿರುವ ಅಮೂಲ್ಯ ಕೊಡುಗೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin