ಪಿಜಿಗೆ ನುಗ್ಗಿ ಸಾಫ್ಟ್ವೇರ್ ಉದ್ಯೋಗಿ ಮೇಲೆ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Rape

ಬೆಂಗಳೂರು,ಆ.31-ಕಳ್ಳತನಕ್ಕಾಗಿ ಪಿಜಿವೊಂದಕ್ಕೆ ನುಗ್ಗಿದ ದುಷ್ಕರ್ಮಿ, ಹಣ-ಆಭರಣ ಸಿಗದಿದ್ದರಿಂದ ಮಹಿಳಾ ಸಾಫ್ಟವೇರ್ ಉದ್ಯೋಗಿ ಮೇಲೆ ಅತ್ಯಾಚಾರವೆಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.   ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಸರಹದ್ದಿನಲ್ಲಿ ಮಹಿಳಾ ಪಿಜಿ ಇದ್ದು ಇಲ್ಲಿ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ವಾಸವಾಗಿದ್ದರು. ಆ.26ರಂದು ಈ ಉದ್ಯೋಗಿ ಪಿಜಿಯಲ್ಲಿ ಮಲಗಿದ್ದಾಗ, ಬಾಗಿಲು ತಳ್ಳಿಕೊಂಡು ಒಳನುಗ್ಗಿದ ದುಷ್ಕರ್ಮಿ ಹಣ-ಆಭರಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಈಕೆಗೆ ಎಚ್ಚರವಾಗಿದೆ.   ತಕ್ಷಣ ಆಕೆಗೆ ಹಣ-ಆಭರಣಕ್ಕೆ ಒತ್ತಾಯಿಸಿದಾಗ ತನ್ನ ಬಳಿ ಇಲ್ಲವೆಂದು ಹೇಳಿದ್ದಾರೆ. ಈ ವೇಳೆ ಆಕೆ ಮೇಲೆ ಅತ್ಯಾಚಾರವೆಸಗಿ ಆರೋಪಿ ಪರಾರಿಯಾಗಿದ್ದಾನೆ.

ಈ ಸಂಬಂಧ ಆ.27ರಂದು ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗಾಗಿ ಪಿಜಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin