ಪಿಡಿಒ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

karnataka-examination-board

ಬೆಂಗಳೂರು, ನ.06 : 815 ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ), 809 ಗ್ರಾಮ ಪಂಚಾಯತಿ ಕಾರ್ಯದರ್ಶಿ ಒಟ್ಟು 1624 ಹುದ್ದೆಗಳಿಗೆ 29 ಜನವರಿ 2017 ಭಾನುವಾರದಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಸ್ಪರ್ಧೆ ನಡೆಸಲಿದೆ. ಇಂದು ಸ್ಪರ್ಧಾತ್ಮಕ ಪರೀಕ್ಷೆ ವೇಳಾ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, 1624 ಹುದ್ದೆಗಳಿಗೆ ಸುಮಾರು 3,62,899 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ವೇಳಾ ಪಟ್ಟಿ :

ಪತ್ರಿಕೆ – 1 : ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್ (200 ಅಂಕಗಳಿಗೆ)
29 ಜನವರಿ 2017 – ಬೆಳಿಗ್ಗೆ 10.30 ರಿಂದ 12.30ರ ವರೆಗೆ ಮೊದಲ ಪತ್ರಿಕೆ ಒಟ್ಟು 200 ಅಂಕಗಳಿಗೆ ಪರೀಕ್ಷೆ
ಪ್ರತಿಕೆ-2 : ‘ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಜ್ಞಾನ- ಕರ್ನಾಟಕ ಗ್ರಾಮ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಹಾಗೂ ನಿಯಮಗಳು ಮತ್ತು ತಿದ್ದುಪಡಿಗಳು’
29 ಜನವರಿ 2017 ಮದ್ಯಾಹ್ನ 2.30 ರಿಂದ ಸಂಜೆ 4.30 ರ ವರೆಗೆ

 

ಹೆಚ್ಚಿನ ಮಾಹಿತಿಗಾಗಿ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ httpr//kea.kar,nic.in ಗೆ ಭೇಟಿ ನೀಡಿ.

► Follow us on –  Facebook / Twitter  / Google+

 

Facebook Comments

Sri Raghav

Admin