ಪಿಯುಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಆಲ್ ದಿ ಬೆಸ್ಟ್ ಹೇಳಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು,ಮಾ.1-ಇಂದಿನಿಂದ ಆರಂಭವಾಗಿರುವ ದ್ವಿತೀಯ ವರ್ಷದ ಪದವಿಪೂರ್ವ ಪರೀಕ್ಷೆ ಬರುತ್ತಿರುವ ವಿದ್ಯಾರ್ಥಿಗಳು ಹೆದರದೇ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿರುವ ಮುಖ್ಯಮಂತ್ರಿಗಳು, ಜೀವನದಲ್ಲಿ ಒಮ್ಮೆ ಅವಕಾಶ ತಪ್ಪಿದರೂ ಮತ್ತೊಂದು ಅವಕಾಶ ಸಿಕ್ಕೇ ಸಿಗುತ್ತದೆ. ಜೀವನ ಎಂಬುದು ಮೊಟಕುಗೊಂಡರೆ ಮತ್ತೊಮ್ಮೆ ನಮಗೆ ದೊರೆಯುವುದಿಲ್ಲ ಎಂಬ ಎಚ್ಚರವಿರಲಿ. ಯಾವುದೇ ಪರೀಕ್ಷೆಯಾಗಲಿ ಜೀವನಕ್ಕಿಂತ ದೊಡ್ಡದಲ್ಲ ಕಡಿಮೆ ಅಂಕ ಗಳಿಸಿದ್ದೇನೆ ಎಂಬ ಅನಗತ್ಯ ಆತಂಕಬಿಟ್ಟು ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಹೇಳಿದರು.

ನಿಮ್ಮೊಂದಿಗೆ ನಿಮ್ಮನ್ನು ಸದಾ ಪ್ರೀತಿಸುವ ಸಹೋದರ-ಸಹೋದರಿಯರು ಸದಾಕಾಲ ಜೊತೆ ಇರುತ್ತಾರೆ ಎಂಬುದನ್ನು ಮರೆಯಬಾರದು. ಹೀಗೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಶುಭಾಶಯ ಕೋರಿರುವ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

Facebook Comments

Sri Raghav

Admin