ಪಿಯು ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿಗಳಿಗೆ ಜಾಮೀನು, ಮಾಹಿತಿದಾರರಿಗೆ ಭಯ

ಈ ಸುದ್ದಿಯನ್ನು ಶೇರ್ ಮಾಡಿ

Question-Paper--v

ತುಮಕೂರು, ಅ.8-ಕಳೆದ ಎರಡು ವರ್ಷಗಳ ಹಿಂದೆ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಮುಖ ಆರೋಪಿಗಳಾದ ಶಿವಕುಮಾರಯ್ಯ ಸೇರಿದಂತೆ ಮೂವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಈ ಹಿನ್ನೆಲೆಯಲ್ಲಿ ಸೋರಿಕೆ ಜಾಲ ಪತ್ತೆಗೆ ನೆರವಾಗಿದ್ದ ಮಾಹಿತಿದಾರರು ಚಿಂತೆಗೊಳಗಾಗಿದ್ದಾರೆ. ಶಿವಕುಮಾರಯ್ಯ ಗ್ಯಾಂಗ್ ಹೊರಬಂದರೆ ತಮಗೆ ಏನು ಮಾಡುತ್ತಾರೋ ಎಂಬ ಭಯದಿಂದ ಮಾಹಿತಿದಾರರು ಕಂಗಾಲಾಗಿದ್ದಾರೆ.

ಈ ಪ್ರಶ್ನೆ ಪತ್ರಿಕೆ ಜಾಲ ಬೇಧಿಸಿ ಬಂಧಿಸುವ ಸಂದರ್ಭ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಹಾಗೂ ಮಾಹಿತಿದಾರರಿಗೆ ಶಿವಕುಮಾರಯ್ಯ ಗ್ಯಾಂಗ್‍ನ ಭಯ ಕಾಡತೊಡಗಿದೆ. ಆದ್ದರಿಂದ ಅಂದಿನ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದ ಪೊಲೀಸ್ ಸಿಬ್ಬಂದಿ ಮತ್ತು ಮಾಹಿತಿದಾರರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಲಾಗಿದೆ.

Facebook Comments

Sri Raghav

Admin