ಪಿರಿಯಾಪಟ್ಟಣ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

piriypattan
ಪಿರಿಯಾಪಟ್ಟಣ, ಆ.24- ಇಲ್ಲಿನ ಪುಣ್ಯ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ಥಳೀಯ ಬಿಜೆಪಿ ಮುಖಂಡ ಶ್ರೀನಿವಾಸಗೌಡ ಅವರ ಪುತ್ರ ಮೋಹಿತ್‌ಗೌಡ (8) ಮೃತ ದುರ್ದೈವಿ. ಶಾಲೆಗೆ ಬಂದ ಸ್ವಲ್ಪ ಸಮಯದಲ್ಲೇ ಆತ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕೊಂಡೊಯ್ದಾಗ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಲವರು ಶಾಲೆ ಬಳಿ ಬಂದು ಏನಾಗಿದೆ ಎಂದು ಕುತೂಹಲದಲ್ಲಿ ಬಂದಿದ್ದವರು ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಚಿತ್ರವೆಂದರೆ ಕಳೆದ ವರ್ಷ ಇದೇ ಶಾಲೆಯಲ್ಲಿ ಬಿಜೆಪಿ ಮುಖಂಡ ಮೋಹನ್ ಕುಮಾರ್ ಎಂಬುವರ ಪುತ್ರ ಸನ್ಮಿತ್ ಎಂಬ ವಿದ್ಯಾರ್ಥಿ ಶಾಲೆಯಿಂದ ಕಾಣೆಯಾಗಿದ್ದ. ಆತನ ಹುಡುಕಾಟ ನಡೆಸಿದಾಗ ಶವವಾಗಿ ಪತ್ತೆಯಾಗಿದ್ದ.  ಈ ಘಟನೆಯಿಂದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin