ಪಿಲ್ಲಗುಂಪೆ ಗ್ರಾಮದಲ್ಲಿ ನೂತನ ಪೈಪ್‍ಲೇನ್ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

sulibele--2

ಸೂಲಿಬೆಲೆ, ಆ.20-ಪಿಲ್ಲಗುಂಪೆ  ಗ್ರಾಮದಲ್ಲಿ ನೂತನ ಪೈಪ್‍ಲೇನ್ ಹಾಗೂ ಮನೆಮನೆಗೆ ಕೊಳಾಯಿ ಅಳವಡಿಕೆ ಕಾಮಗಾರಿಗೆ ರಾಜ್ಯ ಒಕ್ಕಲಿಗರ ಸಂಘದ ಪ್ರ.ಕಾರ್ಯದರ್ಶಿ ಹುಲ್ಲೂರು ಸಿ.ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಗ್ರಾಮದಲ್ಲಿ ಹಿಂದೆ ಅಳವಡಿಸಲಾಗಿದ್ದ ಪೈಪ್‍ಲೈನ್ ಶಿಥಿಲಗೊಂಡ ಕಾರಣ ಹೊಸದಾಗಿ ಅಳವಡಿಕೆ ಮಾಡಲಾಗುತ್ತಿದೆ. ಅಲ್ಲದೆ ಎತ್ತರ ಪ್ರದೇಶದ ಮನೆಗಳಿಗೆ ಸರಿಯಾಗಿ ನೀರು ಸರಬರಾಜಾಗದೆ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ಇಡೀ ಗ್ರಾಮಕ್ಕೆ ಹೊಸದಾಗಿ ಪೈಪ್‍ಲೈನ್ ಅಳವಡಿಸಿ ಪ್ರತಿ ಮನೆಗೂ ಹೊಸ ಕೊಳಾಯಿಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯ ವಿಶ್ವನಾಥ್ ಮಾತನಾಡಿ, ನೀರು ಅತ್ಯಮೂಲ್ಯ ವಸ್ತುವಾಗಿದ್ದು ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಕೆ ಮಾಡುವುದರ ಮೂಲಕ ಜಲ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.ತಾಲೂಕು ಟಿಎಪಿಸಿಎಂಎಸ್ ನಿದೇಶಕ ಎಲ್ ಅಂಡ್‍ಟಿ ಮಂಜುನಾಥ್, ಹಾಪ್‍ಕಾಮ್ಸ್ ನಿರ್ದೇಶಕ ಸತೀಶ್, ಗ್ರಾಪಂ ಸದಸ್ಯರಾದ ಮದ್ದೂರಪ್ಪ, ಮಲ್ಲಿಮಾಕನಪುರ ತಮ್ಮಣ್ಣ, ವೆಂಕಟೇಶ್, ಗಣೇಶಾಚಾರಿ, ಗಣೇಶ್, ಮುನಿಯಪ್ಪ, ಆಂಜಿನಪ್ಪ, ರೆಡ್ಡಪ್ಪ, ಲಕ್ಷ್ಮಿಪತಿ, ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin