ಪಿಸ್ತೂಲ್ ತೋರಿಸಿ ಬೆದರಿಸಿದ ಪಿಎಸ್‍ಐಗೆ ಗ್ರಾಮಸ್ಥರಿಂದ ಗೂಸಾ

ಈ ಸುದ್ದಿಯನ್ನು ಶೇರ್ ಮಾಡಿ

Chikkamagaluru-PSI-Gun

ಚಿಕ್ಕಮಗಳೂರು,ಫೆ.28- ಕಾರ್‍ಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಪಿಎಸ್‍ಐ ಒಬ್ಬರು ಪಿಸ್ತೂಲ್ ತೋರಿಸಿ ಬೆದರಿಸಿದರೆಂದು ಗ್ರಾಮಸ್ಥರು ಹಾಗೂ ಮೂವರು ಪೊಲೀಸರ ನಡುವೆ ಮಾರಾಮಾರಿ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಗ್ರಾಮಾಂತರ ಭಾಗದ ಸಿರಗುಂದ ಬಳಿಯ ಮೂಗುತಿಹಳ್ಳಿ ಗ್ರಾಮದಲ್ಲಿ ಜರುಗಿದೆ.  ಗ್ರಾಮಾಂತರ ಠಾಣೆ ಪಿಎಸ್‍ಐ ಗವಿರಾಜ್ ಪಿಸ್ತೂಲ್ ತೋರಿಸಿ ಬೆದರಿಸಿದರೆಂದು ಪಿಎಸ್‍ಐ ಸೇರಿದಂತೆ ಮೂವರು ಪೊಲೀಸರನ್ನು ಗ್ರಾಮಸ್ಥರು ಕೂಡಿಹಾಕಿ ಥಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ , ಮಾರಾಮಾರಿಯೂ ನಡೆದಿದೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ನಟರಾಜು ಎಂಬುವರು ತಮ್ಮ ಕಾರಿನಲ್ಲಿ ತೆರಳುವಾಗ ಹಿಂದಿನಿಂದ ಪಿಎಸ್‍ಐ ಗವಿರಾಜ್ ಹಾಗೂ ಇನ್ನಿಬ್ಬರು ಪೊಲೀಸರಿದ್ದ ಕಾರು ಡಿಕ್ಕಿ ಹೊಡೆದಿದೆ.

ಕಾರು ಚಾಲಕ ನಟರಾಜ್ ಇದನ್ನು ಪ್ರಶ್ನಿಸಿದಾಗ ಪಿಎಸ್‍ಐ ಗವಿರಾಜ್ ದರ್ಪದಿಂದ ವರ್ತಿಸಿ ತಮ್ಮ ಬಳಿಯಿದ್ದ ಪಿಸ್ತೂಲ್ ತೋರಿಸಿ ಬೆದರಿಸಿದರು ಎಂದು ಹೇಳಲಾಗಿದೆ.   ಇದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರ ದುಂಡಾವರ್ತನೆಯನ್ನು ವಿರೋಧಿಸಿ ಮಾತಿಗೆ ಮಾತು ನಡೆಸಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಪರಸ್ಪರರ ನಡುವೆ ಮಾರಾಮಾರಿಗೆ ತಿರುಗಿದೆ.
ಇದರಿಂದ ಕೋಪಗೊಂಡ ಗ್ರಾಮಸ್ಥರು ಸಮವಸ್ತ್ರದಲ್ಲಿದ್ದ ಪಿಎಸ್‍ಐ ಗವಿರಾಜ್ ಹಾಗೂ ಮಫ್ತಿಯಲ್ಲಿದ್ದ ಇನ್ನಿಬ್ಬರು ಪೊಲೀಸರನ್ನು ಕೂಡಿ ಹಾಕಿದ್ದಾರೆ.

ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಎರಡು ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರು ಎಸ್ಪಿಯವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ರಸ್ತೆತಡೆ ನಡೆಸಿದರು. ಇದರಿಂದಾಗಿ ಕೆಲಕಾಲ ಹೆದ್ದಾರಿಯಲ್ಲಿ 2 ಕಿ.ಮೀ ದೂರದವರೆಗೆ ಟ್ರಾಫಿಕ್‍ಜಾಮ್ ಆಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.   ಈ ವೇಳೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿ ರಸ್ತೆ ತಡೆ ತೆರವುಗೊಳಿಸಿದರು.   ನಂತರ ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ, ಡಿವೈಎಸ್ಪಿ ಹುಸೇನ್ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.

ಮಾರಾಮಾರಿ ಸಂಬಂಧ ಪೊಲೀಸರು 6 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಸ್‍ಪಿ, ಡಿವೈಎಸ್ಪಿ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.   ತನಿಖೆಗೆ ಬಂದಿದ್ದರು: ಕಳವು ಪ್ರಕರಣವೊಂದರ ತನಿಖೆಗಾಗಿ ಮೂವರು ಪೊಲೀಸರು ಖಾಸಗಿ ಕಾರಿನಲ್ಲಿ ತೆರಳುತ್ತಿದ್ದರು . ಈ ವೇಳೆ ಮುಂದೆ ಚಲಿಸುತ್ತಿದ್ದ ಕಾರು ಬ್ರೇಕ್ ಹಾಕದ್ದರಿಂದ ಪೊಲೀಸರ ಕಾರ್ ಡಿಕ್ಕಿಯಾಗಿದೆ ಎಂದು ಎಸ್‍ಪಿ ಅಣ್ಣಾಮಲೈ ತಿಳಿಸಿದ್ದಾರೆ.   ಪೊಲೀಸರನ್ನು ವಶಕ್ಕೆ ತೆಗೆದುಕೊಂಡಿದ್ದವರ ವಿರುದ್ದ ಪ್ರಕರಣದ ದಾಲಿಸಲು ಉದ್ದೇಶಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin