ಪುಂಟ್‍ಲ್ಯಾಂಡ್‍ನ ಸೇನಾ ನೆಲೆ ಮೇಲೆ ಉಗ್ರರ ದಾಳಿ : 60 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Somalia--01

ಮೊಗಡಿಶು, ಜೂ.9-ಸತತ ಬರಗಾಲ, ತೀವ್ರ ಬಡತನದಿಂದ ನಲುಗುತ್ತಿರುವ ಸೋಮಾಲಿಯಾದಲ್ಲಿ ವ್ಯಾಪಕ ಹಿಂಸಾಚಾರ ಮುಂದುವರಿದಿದೆ. ಅರೆ ಸ್ವಾಯತ್ತ ರಾಜ್ಯವಾದ ಪುಂಟ್‍ಲ್ಯಾಂಡ್‍ನ ಸೇನಾ ನೆಲೆ ಮೇಲೆ ದಾಳಿ ನಡೆಸಿದ ಭಾರೀ ಶಸ್ತ್ರಸಜ್ಜಿತ ಅಲ್-ಶಾಬಾಬ್ ಬಂಡುಕೋರರು 60ಕ್ಕೂ ಹೆಚ್ಚು ಮಂದಿಯನ್ನು ಕೊಂದು ಹಾಕಿದ್ದಾರೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.ದಾಳಿ ನಂತರ ಸೇನಾ ಶಿಬಿರದಲ್ಲಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಅಲ್ ಶಾಬಾಬ್ ಬಂಡುಕೋರರು ಹೇಳಿಕೊಂಡಿದ್ದಾರೆ. ಸ್ಥಳೀಯ ಭದ್ರತಾ ಅಧಿಕಾರಿಗಳ ಪ್ರಕಾರ, ಉಗ್ರಗಾಮಿಗಳೂ ಘರ್ಷಣೆಯಲ್ಲಿ ಮೃತಪಟ್ಟಿದ್ದು, ಆ ಪಾಳೆಯದಲ್ಲೂ ಅಪಾರ ಹಾನಿ ಉಂಟಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin