ಪುಖರಾಯನ್ ರೈಲು ದುರಂತ : ಸತ್ತವರ ಸಂಖ್ಯೆ 133ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

125-Killed

ಪುಖರಾಯನ್, ನ.21– ಉತ್ತರಪ್ರದೇಶದ ಕಾನ್ಪುರದ ಪುಖರಾಯನ್ ಬಳಿ ನಿನ್ನೆ ಬೆಳಗಿನ ಜಾವ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ದುರಂತ ಸಾವಿಗೀಡಾದ ಪ್ರಯಾಣಿಕರ ಸಂಖ್ಯೆ 133ಕ್ಕೇರಿದೆ, ಗಾಯಗೊಂಡ 200ಕ್ಕೂ ಹೆಚ್ಚು ಜನರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ನಿನ್ನೆ ರಾತ್ರಿಯಿಡೀ ದುರಂತ ಸ್ಥಳದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಮುಂದುವರೆದು, 13 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ನಜ್ಜುಗುಜ್ಜಾದ ಬೋಗಿಯ ಮಧ್ಯೆ ಸಿಲುಕಿದ್ದ ಕೆಲವು ಗಾಯಾಳುಗಳನ್ನು ರಕ್ಷಿಸಲಾಗಿದೆ.  ಇಂದೋರ್‍ನಿಂದ ಪಾಟ್ನಾಗೆ ತೆರಳುತ್ತಿದ್ದ ರೈಲು ಕಾನ್ಪುರದಿಂದ 100 ಕಿ.ಮೀ. ದೂರದಲ್ಲಿರುವ ಪುಖರಾಯನ್ ರೇಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿ ಈ ದುರ್ಘಟನೆ ಸಂಭವಿಸಿತು.
ಉರುಳಿಬಿದ್ದ ರೈಲಿನ ಅವಶೇಷಗಳ ಒಳಗೆ ಸಿಲುಕಿದ್ದ 100ಕ್ಕೂ ಅಧಿಕ ಶವಗಳನ್ನು ಈವರೆಗೆ ಹೊರತೆಗೆಯಲಾಗಿದೆ.

ಬೋಗಿಯೊಳಗೆ ಸಿಕ್ಕಿಹಾಕಿಕೊಂಡಿದ್ದ ಅನೇಕ ಪ್ರಯಾಣಿಕರನ್ನು ನಿನ್ನೆ ರಕ್ಷಿಸಲಾಗಿತ್ತು. ಗಾಯಗೊಂಡ 200ಕ್ಕೂ ಹೆಚ್ಚು ಜನರನ್ನು 30 ಆಂಬ್ಯುಲೆನ್ಸ್‍ಗಳ ಮೂಲಕ ಹತ್ತಿರ ಆಸ್ಪತ್ರೆಗಳಿಗೆ ಸೇರಿಸಲಾಗಿತ್ತು.. ತೀವ್ರ ಗಾಯಗೊಂಡವರ ಪರಿಸ್ಥಿತಿ ಶೋಚನಿಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.  ಎನ್‍ಡಿಆರ್‍ಎಫ್, ಪೆÇಲೀಸರು ಮತ್ತು ಅಗ್ನಿಶಾಮಕ ಹಾಗೂ ಸಾರ್ವಜನಿಕರು ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ

► Follow us on –  Facebook / Twitter  / Google+

Facebook Comments

Sri Raghav

Admin