ಪುಟ್ಬಾಲ್ ಕ್ರೀಡಾಂಗಣಕ್ಕಿಂತಲೂ ದೊಡ್ಡದು ಈ ವಿಶ್ವದ ಬೃಹತ್ ವಿಮಾನ…!

ಈ ಸುದ್ದಿಯನ್ನು ಶೇರ್ ಮಾಡಿ

Largest-Plane

ಕ್ಯಾಲಿಫೋರ್ನಿಯಾ, ಜೂ.1-ಅಮೆರಿಕದ ಕ್ಯಾಲಿಫೋರ್ನಿಯಾ ಮರುಭೂಮಿಯಲ್ಲಿ ವಿಶ್ವದ ಅತಿದೊಡ್ಡ ವಿಮಾನವೊಂದು ಸದ್ದಿಲ್ಲದೇ ನಿರ್ಮಾಣವಾಗುತ್ತಿದೆ. ಈ ಬೃಹತ್ ವಿಮಾನದ ವೈಶಿಷ್ಟ್ಯಗಳೇನು..? ಈ ವಿಮಾನದ ಹೆಸರು ಪಾಲ್ ಅಲೆನ್. ಇದು ಫುಟ್ಬಾಲ್ ಮೈದಾನಕ್ಕಿಂತ ದೊಡ್ಡದು. ಇದರ ರೆಕ್ಕಗಳ ಉದ್ದ 385 ಅಡಿಗಳು. 50 ಅಡಿಗಳಷ್ಟು ಎತ್ತರ ಇರುವ ಇದರ ಒಟ್ಟು ತೂಕ 10 ಲಕ್ಷ 30 ಸಾವಿರ ಪೌಂಡ್‍ಗಳು. ಇಂಧನವಿಲ್ಲದೇ 5 ಲಕ್ಷ ಪೌಂಡ್‍ಗಳಷ್ಟು ತೂಕ ಹೊಂದಿರುವ ಇದು 2.50 ಲಕ್ಷ ಪೌಂಡ್ ಡಿಸೇಲ್ ಸಾಮಥ್ರ್ಯವನ್ನು ಹೊಂದಿದೆ.ಈ ಬೃಹತ್ ಏರೋಪ್ಲೆನ್‍ಗೆ 28 ಚಕ್ರಗಳಿದ್ದು, ಆರು 747 ಜೆಟ್ ಎಂಜಿನ್‍ಗಳನ್ನು ಒಳಗೊಂಡಿದೆ. ಇದಕ್ಕೆ ಬಳಿಸಿರುವ ವೈರುಗಳನ್ನು ನೇರವಾಗಿ ಎಳೆಯುತ್ತಾ ಹೋದರೆ ಅದು 60 ಮೈಲಿಗಳಷ್ಟಾಗುತ್ತದೆ. ಇದು ಎಷ್ಟು ಬೃಹದಾಕಾರವಾಗಿದೆ ಎಂದು ದೂರದ ಪರ್ವತದಿಂದಲೂ ಇದು ಸುಲಭವಾಗಿ ಕಾಣಿಸುತ್ತದೆ. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ಸಿಯಾಟಲ್ ಸೀಹಾಕ್ಸ್ ಸಂಸ್ಥೆಯ ಒಡೆಯ ಪಾಲ್ ಅಲೆನ್ ಈ ವಿಮಾನದ ಮಾಲೀಕ. ಅವರ ಹೆಸರನ್ನೇ ಈ ವಿಮಾನಕ್ಕೆ ಇಡಲಾಗಿದೆ. ಇಷ್ಟು ದೊಡ್ಡ ವಿಮಾನವನ್ನು ಪ್ರಯಾಣಿಕರಿಗಾಗಿ ನಿರ್ಮಿಸಿಲ್ಲ. ಬದಲಿಗೆ ಗಗನದಿಂದಲೇ ರಾಕೆಟ್‍ಗಳನ್ನು ಉಡಾವಣೆ ಮಾಡಲು ಇದನ್ನು ಬಳಸಲಾಗುತ್ತದೆ(ಇದನ್ನು ಏರ್ ಲಾಂಚ್ ರಾಕೆಟ್ ಏರ್‍ಪ್ಲೇನ್ ಎನ್ನಬಹುದು).

ಕ್ಯಾಲಿಫೋರ್ನಿಯಾದ ಮರುಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಈ ದೈತ್ಯಾಕಾರದ ವಿಮಾನವನ್ನು ನಿನ್ನೆ ಮೊದಲ ಬಾರಿಗೆ ಹ್ಯಾಂಗರ್‍ನಿಂದ (ವಿಮಾನ ನಿರ್ಮಾಣವಾಗುವ ಅಥವಾ ನಿಲುಗಡೆಯಾಗುವ ಸ್ಥಳ) ಹೊರ ತರಲಾಗಿದೆ.   ಇದರ ನಿರ್ಮಾಣಕ್ಕಾಗಿ ಸರ್ಕಾರದಿಂದ ವಿಶೇಷ ಅನುಮತಿ ಪಡೆದಿದ್ದಾರೆ. 2019ರಲ್ಲಿ ವಿಶ್ವದ ಅತಿದೊಡ್ಡ ವಿಮಾನ ಪರೀಕ್ಷಾರ್ಥ ಹಾರಾಟ ನಡೆಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin