ಪುಣೆಯ ಬೇಕರಿಯೊಂದರಲ್ಲಿ ಭೀಕರ ಅಗ್ನಿ ದುರಂತ : 6 ಮಂದಿ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Bekary-01
ಪುಣೆ, ಡಿ.30-ಬೇಕರಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಆರು ಮಂದಿ ಸಜೀವ ದಹನಗೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಕೊಂಡ್ವಾ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ.  ಬಹು ಅಂತಸ್ತಿನ ಕಟ್ಟಡ ನೆಲ ಅಂತಸ್ತಿನಲ್ಲಿದ್ದ ಈ ಬೇಕರಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಶಾಪ್‍ನಲ್ಲಿ ಮಲಗಿದ್ದ ಆರು ಕಾರ್ಮಿಕರು ಉಸಿರುಗಟ್ಟಿ ನಂತರ ಅಂಗಡಿಯೊಳಗೆ ಸಜೀವ ದಹನಗೊಂಡರು ಎಂದು ಅಗ್ನಿಶಾಮಕ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

Bekary-02

Eesanje News 24/7 ನ್ಯೂಸ್ ಆ್ಯಪ್ –  Click Here to Download 

Bekary-03

Facebook Comments

Sri Raghav

Admin