ಪುತ್ರಿ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಕ್ರಮಕ್ಕೆ ತಂದೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

kgf

ಕೆಜಿಎಫ್, ಸೆ.8- ವೈದ್ಯರ ನಿರ್ಲಕ್ಷ್ಯದಿಂದ ತಮ್ಮ ಪುತ್ರಿ ಮೃತಪಟ್ಟಿದ್ದು, ಮಣ್ಣನ್ ಆಸ್ಪತ್ರೆ ವೈದ್ಯೆ ಡಾ.ಮೈಥಿಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕಮಲಾಕರ್ ಹಾಗೂ ಜಿಲ್ಲಾಧಿಕಾರಿಗಳಿಗೆ ನಗರದ ಪ್ರಿಯದರ್ಶನ್ ಎಂಬುವರು ದೂರು ನೀಡಿದ್ದಾರೆ.ತಮ್ಮ ಮಗಳು ಪ್ರಿಸಿಲಾ (27) ಗರ್ಭಿಣಿಯಾಗಿದ್ದಳು. ಕಳೆದ ತಿಂಗಳು 24ರಂದು ಚಳಿಜ್ವರ ಕಾಣಿಸಿಕೊಂಡಿದ್ದರಿಂದ ಮಣ್ಣನ್ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದೆವು. 28ರ ವರೆಗೆ ಚಿಕಿತ್ಸೆ ನೀಡಿದ ವೈದ್ಯರಾದ ಡಾ.ಮೈಥಿಲಿ ನಂತರ ರಕ್ತ ಪರಿಶೀಲಿಸಿ ಡೆಂಘೀ ಜ್ವರ ಇರುವುದಾಗಿ ಶಂಕಿಸಿ ಕೂಡಲೇ ಕೋಲಾರದ ಆರ್.ಎಲ್.ಜಲಪ್ಪ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.
ಬೆಂಗಳೂರಿನ ಮದರ್‍ಹೂಡ್ ಆಸ್ಪತ್ರೆ, ಅಲ್ಲಿಂದ ಸರ್ಕಾ ವಲ್ರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಪ್ರಿಸಿಲಾ ಮೃತಪಟ್ಟಿದ್ದಾಳೆ. ಅಲ್ಲದೆ, ಪ್ರಿಸಿಲಾ ಕಳೆದ ಹತ್ತು ದಿನಗಳಿಂದ ಡೆಂಘೀಯಿಂದ ಬಳಲುತ್ತಿದ್ದು, ಪ್ಲೇಟ್‍ಲೆಟ್ಸ್ ಕಡಿಮೆಯಾಗಿ ಮೃತಪಟ್ಟಿರುವುದಾಗಿ ದೃಢಪಟ್ಟಿದೆ ಎಂದು ಹೇಳಿದರು.ಡಾ.ಮೈಥಿಲಿ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ತನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಅವರು ಆರೋಪಿಸಿದರು. ಈ ಸಂಬಂಧ ರಾಬರ್ಟ್‍ಸನ್‍ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಹೇಳಿದರು.

 

► Follow us on –  Facebook / Twitter  / Google+

 

Facebook Comments

Sri Raghav

Admin