ಪುರಭವನದ ಬಾಡಿಗೆ ದರ ಪರಿಷ್ಕರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23-ಬಿಬಿಎಂಪಿಯು ಪುಟ್ಟಣ್ಣಚೆಟ್ಟಿ ಪುರಭವನದ ಬಾಡಿಗೆ ದರವನ್ನು ಪರಿಸ್ಕಂತ ಗೊಳಿಸಿದ್ದು, ದಿನವೊಂದಕ್ಕೆ ಗರಿಷ್ಠ 75 ಸಾವಿರ ಕನಿಷ್ಠ 35 ಸಾವಿರ ವಿಧಿಸಿದೆ.ಹವಾನಿಯಂತ್ರಿತ ಸೇರಿ ದಿನವೊಂದಕ್ಕೆ 75 ಸಾವಿರ, ಹವಾನಿಯಂತ್ರಿತ ಹೊರತುಪಡಿಸಿ 60 ಸಾವಿರ, ರಿಯಾಯಿತಿ ಸಂದರ್ಭದಲ್ಲಿ ಕನಿಷ್ಠ 35 ಸಾವಿರ ರೂ. ಬಾಡಿಗೆ ವಿಧಿಸಲಾಗುತ್ತದೆ. ಇದರಲ್ಲಿ ಹವಾನಿಯಂತ್ರಣ ಸೌಲಭ್ಯ ಹೊರತಾಗಿರುತ್ತದೆ.  ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಅಂಧರ ಮತ್ತು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳು, ರಾಜ್ಯಸರ್ಕಾರ- ಪಾಲಿಕೆ ಕಾರ್ಯಕ್ರಮಗಳು, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ, ಸರ್ಕಾರದ ಅನುದಾನ ಪಡೆದು ನಿರೂಪಿಸುವಂತಹ ಕನ್ನಡ ಕಾರ್ಯಕ್ರಮಗಳು, ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದ ಸಂಘ-ಸಂಸ್ಥೆಗಳ ಕಲ್ಯಾಣ ಕಾರ್ಯ ಕ್ರಮಗಳಿಗೆ ರಿಯಾಯಿತಿ ದರದಲ್ಲಿ ಪುರಭವನವನ್ನು ಬಾಡಿಗೆಗೆ ನೀಡಲಾಗುತ್ತದೆ. ವರ್ಷಕ್ಕೆ ಒಂದು ಬಾರಿ ಮಾತ್ರ ರಿಯಾಯಿತಿ ಪಡೆಯಲು ಅವಕಾಶವಿರುತ್ತದೆ.

ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆ ಯವರೆಗೆ ಮಾತ್ರ ಕಾರ್ಯಕ್ರಮಗಳನ್ನು ಆಯೋಜಿಸ ಬಹುದಾಗಿದೆ. ಪಾಲಿಕೆಯಿಂದ ಕಲ್ಪಿಸಿರುವ ದೀಪದ ವ್ಯವಸ್ಥೆ ಹೊರತುಪಡಿಸಿ ಯಾವುದೇ ತರಹದ ಹೆಚ್ಚುವರಿ ವಿಶೇಷ ಪ್ರತ್ಯೇಕ ಅಲಂಕಾರಿಕ ದೀಪಗಳ ವ್ಯವಸ್ಥೆ ಮಾಡುವ ಹಾಗಿಲ್ಲ.ಕಾರ್ಯಕ್ರಮದ ವೇಳೆ ಯಾವುದೇ ಅವಘಡಗಳು ಸಂಭವಿಸಿದರೆ ಬಾಡಿಗೆದಾರರೇ ಸಂಪೂರ್ಣ ಹೊಣೆ ಗಾರರಾಗಿರುತ್ತಾರೆ. ಪುರಭವನದ ವಸ್ತುಗಳು, ಹವಾನಿಯಂತ್ರೋಪಕರಣಗಳಿಗೆ ಯಾವುದೇ ಧಕ್ಕೆಯಾಗದಂತೆ ಆಯೋಜಕರು ಎಚ್ಚರ ವಹಿಸಬೇಕಾಗಿದೆ. ಕಾರ್ಯಕ್ರಮದ ದಿನಾಂಕದಿಂದ 11 ರಿಂದ 15ದಿನಗಳ ಮುಂಚೆ ರದ್ದುಪಡಿಸಿದಲ್ಲಿ ಶೇ.25ರಷ್ಟು ಬಾಡಿಗೆ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಒಂದು ವೇಳೆ ಕಾರ್ಯಕ್ರಮದ ದಿನಾಂಕದಿಂದ 10 ದಿನಗಳ ಮುಂಚಿತವಾಗಿ ರದ್ದುಪಡಿಸಿದಲ್ಲಿ ಪೂರ್ಣ ಮೊತ್ತ ಪಾಲಿಕೆ ಮುಟ್ಟುಗೋಲು

ಹಾಕಿಕೊಳ್ಳುತ್ತದೆ.ನಿಷೇಧಿತ ಕಾರ್ಯಕ್ರಮಗಳು:

ಚುನಾವಣೆಗೆ ಸಂಬಂಧಿಸಿದ ಪ್ರಚಾರ ಕಾರ್ಯಗಳು, ಮದುವೆ, ನಾಮಕರಣ, ಆರತಕ್ಷತೆ ಹಾಗೂ ಇದಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳು, ಪ್ರಾಣಿಪಕ್ಷಿ ಪ್ರದರ್ಶನ ಕಾರ್ಯ ಕ್ರಮಗಳು, ಅಶ್ಲೀಲ ಪ್ರದರ್ಶನ ಕಾರ್ಯಕ್ರಮಗಳು ಹಾಗೂ ಸರ್ಕಾರ ಮತ್ತು ಬಿಬಿಎಂಪಿ ನಿಷೇಧಿಸುವ ಕಾರ್ಯಕ್ರಮಗಳನ್ನು ಪುರಭವನದಲ್ಲಿ ಹಮ್ಮಿಕೊಳ್ಳುವಂತಿಲ್ಲ ಎಂದು ಆಯುಕ್ತರು ಆದೇಶ ಹೊರಡಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin