ಪುರಸಭಾ ವ್ಯಾಪಿಯ ಅಕ್ರಮ ಕಟ್ಟಡಗಳ ತೆರವು ಶತಃಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

10

ಬಾದಾಮಿ,ಮಾ.1- ಪುರಸಭಾ ವ್ಯಾಪ್ತಿಯ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು. ಅನಧಿಕೃತ ಕಟ್ಟಡಗಳನ್ನು ಸ್ವಯಂಪ್ರೇರಿತರಾಗಿ ತೆರವುಗೊಳಿಸದಿದ್ದರೆ ಪುರಸಭೆಯ ಅಧಿನಿಯಮದ ಪ್ರಕಾರ ಬಲವಂತವಾಗಿ ತೆರವು ಮಾಡಬೇಕಾಗುತ್ತದೆ ಎಂದು ಪುರಸಭಾಧ್ಯಕ್ಷ ಫಾರೂಕ ಅಹಮ್ಮದ ದೊಡಮನಿ ಅಕ್ರಮ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ನಗರದ ಪುರಸಭೈ ಭವನದಲ್ಲಿ ಹಮ್ಮಿಕೊಂಡ ಸಾಧಾರಣ ಸಭೈಯಲ್ಲಿ ಮಾತನಾಡಿದ ಅವರು, ಯಾವುದೇ ಶಿಫಾರಸ್ಸು, ಆಮಿಷ ಲೆಕ್ಕಿಸದೇ ನಿರ್ಧಾಕ್ಷಿಣ್ಯವಾಗಿ ಅಕ್ರಮವಾಗಿ ಪುರಸಭೈಯ ಜಾಗೆಯಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿದ ಮಾಲೀಕರಿಗೆ ಈಗಾಗಲೇ ನೋಟಿಸ್ ಕಳಿಸಿದ್ದು, ಕೂಡಲೇ ತೆರವುಗೊಳಿಸಬೇಕು. ಇಲ್ಲವೇ ನಾವೇ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ವಸೂಲಿ ಮಾಡಲಾಗುತ್ತದೆ ಎಂದು ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿಸಿದರು.

ಈ ಸಂದರ್ಭದಲ್ಲಿ ಎ.ಎಸ್. ಪೀರಜಾದೆ ಹಾಗೂ ಕಾಚಟ್ಟಿ, ವಸಂತ ಮೇಲಿನಮನಿ, ಚೌಡಿ ಮದ್ಯ ಪ್ರವೇಶಿಸಿದರು.ಎ.ಎಸ್. ಪೀರಜಾದೆ ಮಾತನಾಡಿ, ಸಭೈಯಲ್ಲಿ ಪುರಸಭೈಯ ಜಾಗೆಯನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂದು ನೋಟಿಸ್ ನೀಡಿದ್ದಿರಿ. ನಗರದಲ್ಲಿ ನಾವಷ್ಟೇ ಅಲ್ಲ ಅನೇಕರು ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಅದಕ್ಕೆ ನೀವೇನು ಕ್ರಮ ಕೈಗೊಂಡಿದ್ದಿರಿ? ಗಾಂಧಿ ನಗರದಲ್ಲಿರುವ ಪಟ್ಟಣಶೆಟ್ಟಿ ಕಟ್ಟಡ ಹಾಗೂ ಚಾಲುಕ್ಯ ನಗರದಲ್ಲಿರುವ ಪವಾರರ ಕಟ್ಟಡ ಹಾಗೂ ಅರಣ್ಯ ಇಲಾಖೆಯವರ ಅತಿಕ್ರಮಣ ಕಟ್ಟಡಗಳನ್ನು ನಿರ್ಮಿಸಿದ್ದು ಅವರಿಗೇಕೆ ನೋಟಿಸ್ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಪುರಸಭಾ ಸದಸ್ಯ ಬಸವರಾಜ ತೀರ್ಥಪ್ಪ ಮಧ್ಯ ಪ್ರವೇಶಿಸಿ ನೀವು ಅವರಿವರ ಜಾಗೆಯ ಬಗ್ಗೆ ಮಾತನಾಡದೇ ನಿಮ್ಮ ವಿಚಾರವನ್ನಷ್ಟೇ ಮಾತನಾಡಿ, ನೀವು ಮೊದಲು ಅಕ್ರಮವಾಗಿ ಕಟ್ಟಿದ ಪುರಸಭೈಯ ಜಾಗೆಯನ್ನು ತೆರವುಗೊಳಿಸಿ. ಅಧಿಕಾರಿಗಳು ಹಂತ ಹಂತವಾಗಿ ಪುರಸಭೈಯ ಜಾಗೆಯಲ್ಲಿ ನಿರ್ಮಿಸಿದ ಕಟ್ಟಡಗಳನ್ನು ತೆರವು ಮಾಡುತ್ತಾರೆ ಎಂದು ಹೇಳಿದರು.

ಮಾಜಿ ಪುರಸಭಾ ಅಧ್ಯಕ್ಷ ಹಾಲಿ ಸದಸ್ಯ ರಾಜಮಹಮ್ಮದ ಬಾಗವಾನ ಮಾತನಾಡಿ, ನಾವು ಪುರಸಭೈಯ 23 ಸದಸ್ಯರು ನಿಮ್ಮ ಬಗ್ಗೆ ಆರೋಪ ಮಾಡಿಲ್ಲ. ಪುರಸಭೆಯ ಅಧಿಕಾರಿಗಳಿಗೆ ಜನರೇ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದು ಪುರಸಭೈಯ ಜಾಗೆಯಲ್ಲಿ ನಿರ್ಮಿಸಿರುವ ವಸಂತ ಮೇಲಿನ ಮನಿ ಹಾಗೂ ಕಾಚಟ್ಟಿ ಮತ್ತು ಪೀರಜಾದೆ ಜಾಗೆಯನ್ನು ವಶಪಡಿಸಿಕೊಳ್ಳಲು ಜನರೇ ಬೆನ್ನತ್ತಿದ್ದು ದೂರು ನೀಡಿದ್ದಾರೆ. ಅದಕ್ಕೆ ಅಧಿಕಾರಿಗಳು ನಿಮಗೆ ನೋಟಿಸ್ ನೀಡಿದ್ದಾರೆ ಎಂದು ಅವರು ಹೇಳಿದರುನಂತರ ಎ.ಎಸ್. ಪೀರಜಾದೆ ಮಾತನಾಡಿ, ನಾವು ಈಗಾಗಲೇ ಅಕ್ರಮ ಸಕ್ರಮದಡಿ ಕಟ್ಟಡವನ್ನು ಸಕ್ರಮ ಮಾಡಲು ಮನವಿ ನೀಡಿದ್ದೇವೆ ನಮಗೆ ಸಮಯ ನೀಡಬೇಕು ಎಂದು ಅವರು ಕೇಳಿ. ಈ ನಡುವೆ ಅವರ ಹಾಗೂ ಪುರಸಭೈಯ ಸದಸ್ಯರ ನಡುವೆ ಮಾತಿನ ಚಕುಮುಕಿ ಉಂಟಾಗಿ ಸಭೆ ಗದ್ದಲದ ವಾತಾವರಣ ಉಂಟಾಯಿತು. ನಂತರ ಅವರೆಲ್ಲ ಸಭೆಯಿಂದ ಹೊರ ನಡೆದರು.

ಪುರಸಭಾಧ್ಯಕ್ಷ ಫಾರೂಕ ದೊಡಮನಿ ಮಾತನಾಡಿ, ಅಕ್ರಮ ಸಕ್ರಮಸಡಿ ಅರ್ಜಿ ಹಾಕಿದ್ದಾರೆ. ಪುರಸಭೆಯ ವ್ಯಾಪ್ತಿಗೆ ಅಕ್ರಮ-ಸಕ್ರಮ ಬರುವುದಿಲ್ಲ. ಅಕ್ರಮ-ಸಕ್ರಮ ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಅದಷ್ಟು ಶೀಘ್ರವಾಗಿ ಪುರಸಭೆಯ ಜಾಗೆಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ವಿಜಯಲಕ್ಷೀ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಸೆನೆಟರಿ, ಎ.ಎಚ್. ಮುದ್ದೆಬಿಹಾಳ, ಉಮೇಶ ಬೇಲಿ, ಭಾರತಿ ಶಿರಶಿ, ಗೌರಮ್ಮ ಬೇವೂರ, ಎಫ್.ಎ. ನಾಯಕ. ಶಂಕರ ಬಸವರಾಜ ಗಾಣಿಗೇರ, ಮುತ್ತಣ್ಣ ವಾಲಿಕಾರ, ಆನಂದ ದೊಡಮನಿ, ಶಿವಕುಮಾರ ಹಿರೇಮಠ, ಹನಮಮತ ಹೆಬ್ಬಳ್ಳಿ, ರಾಜು ಹಳ್ಳೂರ, ಗಾಂಜಿ. ಶಾಂತವ್ವ ಗುದಗಿ, ಹನಮಂತ ಹೆಬ್ಬಳ್ಳಿ, ಮಹಮ್ಮದ ಖಲೀಫ ಇತರರಿದ್ದರು.

ಇಲಿಯಾಸ ದೊಡಮನಿ ಮಾತನಾಡಿ, ಈ ಹಿಂದಿನ ಸಭೈಯಲ್ಲಿ ಚರ್ಚಿಸಿದ್ದ ಪೀರಜಾದೆಯವರ ಹಾಗೂ ಕಾಚಟ್ಟಿ ನಿರ್ಮಿಸಿದ ಅಕ್ರಮ ಕಟ್ಟಡದ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ? ಅದರ ಬಗ್ಗೆ ನಿಲುವಳಿ ಏನು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.ಇದಕ್ಕೆ ಪುರಸಭಾ ಮುಖ್ಯಾಧಿಕಾರಿ ಉತ್ತರಿಸಿ ಅವರಿಗೆ ನೋಟಿಸ್ ಜಾರಿಗೆಗೊಳಿಸಿದ್ದು, ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆಯವರು 30ವರ್ಷಗಳಿಂದ ಸ್ಕ್ರ್ಯಾಪ್ ವಸ್ತುಗಳನ್ನು ಏನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಗುಳೇದಗುಡ್ಡ ಪುರಸಭೆಯಲ್ಲಿ ಪ್ರತಿ ವರ್ಷ 3ರಿಂದ 5ಲಕ್ಷದವರೆಗೆ ಸ್ಕ್ರ್ಯಾಪ್ ವಸ್ತುಗಳಿಂದ ಹಣ ಪಡೆಯುತ್ತಿದ್ದಾರೆ. ನಮ್ಮ ಬಾದಾಮಿಯಲ್ಲಿ ನಯಾ ಪೈಸೆಯು ಸ್ಕ್ರ್ಯಾಪ್ ವಸ್ತುಗಳಿಂದ ಬಂದಿಲ್ಲ ಏಕೆ?
                                                                                                                                                                  -ವಿ.ಕೆ.ಬಾಗಲೆ, ಸದಸ್ಯರು ಪುರಸಭೆ
ಪುರಸಭೆಗೆ 18ರಿಂದ 24ಲಕ್ಷ ಹಣವು ಕುಡಿಯುವ ನೀರಿಗಾಗಿ ಅನುದಾನ ಬಿಡುಗಡೆಯಾಗಿದೆ. 6ರಿಂದ 18ಲಕ್ಷ ಹಣ ಸಾರ್ವಜನಿಕ ಶೌಚಾಲಯ, ಸೆಪ್ಟಿ ಟ್ಯಾಂಕ್ ನಿರ್ಮಾಣ, ಒಳಚರಂಡಿ ನಿರ್ಮಾಣ ಮಾಡಲಿ ಬಿಡುಗಡೆಯಾಗಿದ್ದು ಅವೆಲ್ಲವುಗಳನ್ನು ವಾರ್ಡ್‍ವಾರು ಹಂಚಿಕೆ ಮಾಡಿ ಅಭಿವೃದ್ದಿಗೊಳಿಸಲಾಗುವುದು. 7.25ಲಕ್ಷ ಹಣ ಅಂಗವಿಕಲ ಫಲಾನುಭವಿಗಳಿಗೆ ಎಸ್‍ಎಫ್‍ಸಿ ಅನುದಾನದಲ್ಲಿ ವಿತರಿಸಲಾಗುವುದು
                                                                                                                                                     -ಫಾರೂಕ ದೊಡಮನಿ, ಪುರಸಭಾಧ್ಯಕ್ಷ ಬಾದಾಮಿ
ಪುರಸಭೆಯವರು 30ವರ್ಷಗಳಿಂದ ಸ್ಕ್ರ್ಯಾಪ್ ವಸ್ತುಗಳನ್ನು ಏನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಗುಳೇದಗುಡ್ಡ ಪುರಸಭೆಯಲ್ಲಿ ಪ್ರತಿ ವರ್ಷ 3ರಿಂದ 5ಲಕ್ಷದವರೆಗೆ ಸ್ಕ್ರ್ಯಾಪ್ ವಸ್ತುಗಳಿಂದ ಹಣ ಪಡೆಯುತ್ತಿದ್ದಾರೆ. ನಮ್ಮ ಬಾದಾಮಿಯಲ್ಲಿ ನಯಾಪೈಸೆಯು ಸ್ಕ್ರ್ಯಾಪ್ ವಸ್ತುಗಳಿಂದ ಬಂದಿಲ್ಲ ಏಕೆ?
                                                                                                                                                               -ವಿ.ಕೆ. ಬಾಗಲೆ, ಸದಸ್ಯರು ಪುರಸಭೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin