ಪುರಸಭೆಯಲ್ಲಿ ಅವ್ಯವಹಾರ : ತನಿಖೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

chikanayakanahalli

ಚಿಕ್ಕನಾಯಕನಹಳ್ಳಿ, ಸೆ.23- ಪುರಸಭೆಯಲ್ಲಿ ಲೆಕ್ಕಪತ್ರ ಹಾಗೂ ಚೆಕ್ ವಿತರಣೆಯಲ್ಲಿ ನಡೆದಿರವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಆಗ್ರಹಿಸಿದರು.ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಬಿಟ್ಟಿರುವ ಪೈಪ್‍ಲೈನ್ ಇಳಿಸುವ ಕಾಮಗಾರಿ ಕೂಲಿಗೆ 70ಸಾವಿರ ರೂಪಾಯಿ ನೀಡಿರುವುದರ ಹಿಂದೆ ಅವ್ಯವಹಾರ ನಡೆರುವ ಶಂಕೆ ಇದೆ ಎಂದು ಹೇಳಿದರು.ಜೆಡಿಎಸ್ ಪಕ್ಷದ ಸದಸ್ಯರು ಇರುವ ವಾರ್ಡಿಗಳಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗೆ ಶಿಘ್ರವಾಗಿ ಮೋಟಾರ್ ಪಂಪ್‍ಆಳವಡಿಸಿ ವಿದ್ಯುತ್‍ಸಂಪರ್ಕ ಕೊಡಿಸುತ್ತೀರಾ. ಆದರೆ, ನಮ್ಮ ವಾರ್ಡಿನಲ್ಲಿ ಕೊಳವೇ ಬಾವಿ ಕೊರೆದು ತಿಂಗಳುಗಳು ಕಳೆದರೂ ಮೋಟಾರ್ ಪಂಪ್ ಆಳವಡಿಸಿಲ್ಲ ಎಂದು ಆರೋಪಿಸಿದರು.

ಅಧ್ಯಕ್ಷ ಸಿ.ಟಿ.ದಯಾನಂದ್ ಉತ್ತರಿಸಿ, ತುರ್ತು ನೀರಿನ ಸಮಸ್ಯೆ ತಲೆದೂರಿದ್ದರಿಂದ ಪಂಪ್ ಆಳವಡಿಸಿ ನೀರನ್ನು ನೀಡಬೇಕಾಗುತ್ತದೆ ನಮಗೆ ಎಲ್ಲಾ ವಾರ್ಡಿನ ಜನರು ಒಂದೇ ನಾವು ಯಾವುದೇ ಕಾರಣಕ್ಕೂ ಪಕ್ಷಭೇದ ಮಾಡುವುದಿಲ್ಲ ಎಂದರು.ಸದಸ್ಯ ಮಹಮದ್‍ಖಲಂದರ್ ಮಾತನಾಡಿ, ಸಭೆಯಲ್ಲಿ ಸೂಚನಾ ಪತ್ರದ ವಿಷಯಗಳನ್ನು ಚರ್ಚಿಸದೆ ಬೇರೆ ವಿಷಯಗಳ ಚರ್ಚೆ ಮಾಡಿ ಕಾಲ ಹರಣ ಮಾಡುವುದು ಸರಿಯಲ್ಲ. ಸೂಚನಾ ಪತ್ರದಲ್ಲಿರುವ ವಿಷಯಗಳನ್ನು ಚರ್ಚಿಸಿದ ನಂತರ ಬೇರೆ ವಿಷಯಗಳ ಬಗ್ಗೆ ಗಮನ ಹರಿಸಿ ಎಂದರು.
ಪುರಸಭೆಗೆ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಮಂಜೂರಾತಿಯಾಗಿರುವ ನಿಧಿಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಇದುವರೆಗೂ ಮಾಹಿತಿ ನೀಡಿಲ್ಲ ಎಂದು ಎಂದು ಸದಸ್ಯ ಎಂ.ಕೆ.ರವಿಚಂದ್ರ ಹೇಳಿದರು.ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರಾದ ರೇಣುಕಮ್ಮ, ಪುಷ್ಪ,ಟಿ.ರಾಮಯ್ಯ, ಗೀತಾರಮೇಶ್, ಧರಣಿ.ಬಿ.ಲಕ್ಕಪ್ಪ, ರೂಪಶಿವಕುಮಾರ್, ನೇತ್ರಾವತಿ ಶಿವಕುಮಾರ್, ಅಶೋಕ್, ಸಿ.ಡಿ.ಚಂದ್ರಶೇಖರ್, ಸಿ.ರಾಜಶೇಖರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಕೆ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin