ಪುರಸಭೆಯಿಂದ ಉಳಿತಾಯ ಬಜೆಟ್ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

11
ಹೂವಿನಹಡಗಲಿ,ಫೆ.25- ಆರ್ಥಿಕ ವರ್ಷದ ಮುಂಗಡ ಪತ್ರವನ್ನು ಪುರಸಭೆಯ ಅಧ್ಯಕ್ಷ ಆರ್. ಪವಿತ್ರ ಸಭೆಯಲ್ಲಿ ಮಂಡಿಸಿದರು.ನಿನ್ನೆ ನಡೆದ ಬಜೆಟ್ ಸಭೆಯಲ್ಲಿ 2647170 ರೂ. ಗಳ ಉಳಿತಾಯ ಬಜೆಟ್‍ನ್ನು ಘೋಷಿಸಿದರು. ಅಧ್ಯಕ್ಷರು ಉಳಿತಾಯ ಬಜೆಟ್ ಘೋಷಣೆ ಮಾಡಿದ ತಕ್ಷಣ ಸರ್ವಸದಸ್ಯರು ಮೇಜು ಕುಟ್ಟುವುದರ ಮೂಲಕ ಬಜೆಟ್ ಮಂಡನೆಯನ್ನು ಸ್ವಾಗತಿಸಿದರು.ಒಟ್ಟು ಈ ಸಾಲಿನ ಪುರಸಭೆ ಆದಾಯ 22 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಎಸ್‍ಎಫ್‍ಸಿ ಅನುದಾನ, 1.50 ಕೋಟಿ, ಮತ್ತು 14ನೇ ಹಣಕಾಸಿನ ಅನುದಾನ 1.50 ಕೋಟಿ ಸೇರಿದಂತೆ ಇತರೆ ಎಸ್‍ಎಫ್‍ಸಿ ಅನುದಾನ 18 ಕೋಟಿ ಮತ್ತು ಇತರೆ ಅನುದಾನ 2 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಮುಖ್ಯಾಧಿಕಾರಿ ಪ್ರೇಮ್ ಚಾಲ್ರ್ಸ್ ಹೇಳಿದರು.
ಸದರಿ 22 ಕೋಟಿ ರೂ. ಅಂದಾಜು ಅದಾಯ ನಿರೀಕ್ಷಿಸಲಾಗಿದ್ದು, ಅದರಲ್ಲಿ ಅಭಿವೃದ್ದಿಗಾಗಿ 3ಕೋಟಿ ರೂ. ಸಿಬ್ಬಂದಿ ವೇತನ ಮತ್ತು ನಿರ್ವಹಣೆಗಾಗಿ 18ಕೋಟಿ ರೂ. ಸೇರಿದಂತೆ ಇತರೆ ಖರ್ಚಿಗಾಗಿ 1ಕೋಟಿ ರೂ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ಆದಾಯ ಮತ್ತು ವೆಚ್ಚವನ್ನು ಕಡಿತಗೊಳಿಸಿದರೆ 26ಲಕ್ಷಕ್ಕೂ ಹೆಚ್ಚು ಉಳಿತಾಯದ ಬಜೆಟ್ ಆಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು. ಕಛೇರಿ ವ್ಯವಸ್ಥಾಪಕ ಇಮಾಮ್ ಸಾಬ್ ಮುಂಗಡ ಪತ್ರದ ಪೂರ್ಣ ಸಾರಾಂಶವನ್ನು ಓದುವುದರ ಮೂಲಕ ಸಭೆಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಎಸ್. ರಹಿಮಾನ್, ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin