ಪುರುಷರೇ ಪ್ರಾಸ್ಟ್ರೇಟ್ ಸ್ವಾಸ್ಥದ ಬಗ್ಗೆ ಗಮನ ಕೊಡಿ

ಈ ಸುದ್ದಿಯನ್ನು ಶೇರ್ ಮಾಡಿ

health

ಪ್ರಾಸ್ಟ್ರೇಟ್, ವಾಲ್‌ನಟ್ ಗಾತ್ರದ ಒಂದು ಸಣ್ಣ ಗ್ರಂಥಿ, ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯ ಭಾಗ. ಇದು ಬ್ಲ್ಯಾಡರ್‌ನಿಂದ ಹೊರಗಡೆಗೆ ಮೂತ್ರವನ್ನು ಒಯ್ಯುವ ಮೂತ್ರ ವಿಸರ್ಜನ ನಾಳವನ್ನು ಸುತ್ತುವರಿದಿರುತ್ತದೆ. ಗ್ರಂಥಿ ಹಿಗ್ಗಿದಂತೆ ಮೂತ್ರನಾಳವನ್ನು ಒತ್ತರಿಸುತ್ತದೆ. ಇದರಿಂದ ಮೂತ್ರ ಸಂಬಂ ಅಸಹಜ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಬಿನೈನ್ ಪ್ರಾಸ್ಟ್ರೇಟಿಕ್ ಹೈಪರ್‌ಪ್ಲೇಸಿಯಾ (ಬಿಪಿಎಚ್) ಎಂದು ಕರೆಯಲಾಗುತ್ತದೆ. ಬಿಪಿಎಚ್ ಪ್ರಕರಣಗಳು ವಯಸ್ಸಾದಂತೆ ಹೆಚ್ಚುತ್ತವೆ. 60 ವಯಸ್ಸಿನ ಪುರುಷರಲ್ಲಿ ಮತ್ತು 85 ವಯಸ್ಸಿನವರಲ್ಲಿ ಸುಮಾರು ಶೇ.90ರಷ್ಟು ಬಿಪಿಎಚ್ ಕಾಣಿಸಿಕೊಳ್ಳುತ್ತದೆ.

ಬಿಪಿಎಚ್ ಎಂದರೆ ಪ್ರಾಸ್ಟ್ರೇಟ್ ಕ್ಯಾನ್ಸರ್ ಅಲ್ಲ. ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಆಗುವುದೂ ಇಲ್ಲ. ಆದರೆ, ವಯಸ್ಸಿನೊಂದಿಗೆ ಬಿಪಿಎಚ್ ಮತ್ತು ಪ್ರಾಸ್ಟ್ರೇಟ್ ಕ್ಯಾನ್ಸರ್ ಎರಡೂ ಬರಬಹುದು ಅಥವಾ ಒಟ್ಟಿಗೆ ಇರಬಹುದು. ಬಿಪಿಎಚ್ ರೋಗ ಲಕ್ಷಣಗಳನ್ನು ಸಾಮಾನ್ಯವಾಗಿ ಕೆಳ ಮೂತ್ರನಾಳ ರೋಗ ಲಕ್ಷಣಗಳು ಎನ್ನಲಾಗುತ್ತದೆ. ಇದರಲ್ಲಿ ಇವೂ ಸೇರುತ್ತವೆ. ವಾಡಿಕೆಗಿಂತ ಹೆಚ್ಚು ಸಲ ಮೂತ್ರ ವಿಸರ್ಜನೆ, ರಾತ್ರಿ ಆಗಾಗ್ಗೆ ಎದ್ದು ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ, ಅನಿಯಂತ್ರಿತವಾಗಿ ಮೂತ್ರ ವಿಸರ್ಜನೆ, ಮೂತ್ರ ಸಣ್ಣದಾಗಿ ಹೋಗುವುದು, ಮೂತ್ರ ನಿಂತು ಹೋಗುವುದು, ಪ್ರಯಾಸದಿಂದ ಮೂತ್ರ ವಿಸರ್ಜನೆ ಈ ಲಕ್ಷಣಗಳು ಬಹಳ ಕಳವಳಕಾರಿ.

ನಿಮ್ಮ ವೈದ್ಯಕೀಯ ಇತಿಹಾಸ, ಲಕ್ಷಣಗಳು ಮತ್ತು ಇನ್ನೂ ಕೆಲವಾರು ಮಾದರಿ ಪರೀಕ್ಷೆಗಳ ಮೂಲಕ ಬಿಪಿಎಚ್ ಪತ್ತೆ ಮಾಡಬಹುದು. ಪಿಎಸ್‌ಎ ಸರಳವಾದ ರಕ್ತ ಪರೀಕ್ಷೆ ಮೂಲಕ ಬಿಪಿಎಚ್ ಇದೆಯೋ ಅಥವಾ ಪ್ರಾಸ್ಟ್ರೇಟ್ ಕ್ಯಾನ್ಸರ್ ಇದೆಯೋ ಎಂದು ಪತ್ತೆ ಮಾಡಬಹುದು ಎಂದು ಡಾ.ಕೇಶವಮೂರ್ತಿ ಹೇಳಿದ್ದಾರೆ. ಕೆಲವು ಸರಳವಾದ ಜೀವನಶೈಲಿ ಮಾರ್ಪಾಡುಗಳು ಬಿಪಿಎಚ್ ರೋಗಿಗೆ ಬಹಳ ಉಪಯೋಗವಾಗಬಹುದು. ಆದರೆ, ಚಿಕಿತ್ಸೆ ಮಾಡಿಸದಿದ್ದರೆ ಮುಂದೆ ಮೂತ್ರನಾಳ ಸೋಂಕುಗಳು, ಮೂತ್ರಪಿಂಡ ಹರಳುಗಳು ಇತ್ಯಾದಿ ಸಂಕೀರ್ಣತೆಗಳು ಉಂಟಾಗಬಹುದು. ಕೊನೆಗೆ ಮೂತ್ರವೇ ಹೊರಬಾರದೇ ಹೋಗಬಹುದು. ಇದನ್ನು ತೀವ್ರಮೂತ್ರಧಾರಣ ಎನ್ನುತ್ತಾರೆ ಡಾ.ವೆಂಕಟೇಶ್ ಕೃಷ್ಣಮೂರ್ತಿ.

health-2
ವಯಸ್ಸು ಹೆಚ್ಚಿದಂತೆ ಪ್ರಾಸ್ಟ್ರೇಟ್ ಕ್ಯಾನ್ಸರ್ ಸಂಭವವೂ ಹೆಚ್ಚುತ್ತದೆ: ಜಗತ್ತಿನಲ್ಲಿ 17 ಲಕ್ಷ ಪ್ರಕರಣಗಳು, ಭಾರತದಲ್ಲಿ 2.88 ಲಕ್ಷ ಪ್ರಕರಣಗಳು ವರದಿಯಾಗಿವೆ. ಇದನ್ನು ಸುಲಭವಾಗಿ ತಡೆಯಬಹುದು. ಆದರೂ ಭಾರತದಲ್ಲಿ ಇದು ಹೆಚ್ಚುತ್ತಲೇ ಇದೆ. ದೆಹಲಿ, ಟ್ರವೆಂಡ್ರಂ, ಕೋಲ್ಕತ್ತಾ ಮತ್ತು ಪುಣೆಗಳಲ್ಲಿ 2ನೇ ಮತ್ತು ಮುಂಬೈ, ಬೆಂಗಳೂರು ಮತ್ತು ಚೆನ್ನೈಗಳಲ್ಲಿ 3ನೇ, ಅತಿ ಸಾಮಾನ್ಯ ಕ್ಯಾನ್ಸರ್. ಒಟ್ಟಾರೆ ಭಾರತದಲ್ಲಿ ಶೇ.2.5ರ ದರದಲ್ಲಿ ಹೆಚ್ಚುತ್ತಿದೆ ಎನ್ನುವುದು ಆತಂಕಕಾರಿ ಸಂಗತಿಯಾಗಿದೆ. ಪ್ರಾಸ್ಟ್ರೇಟ್ ಆರೋಗ್ಯದ ಬಗ್ಗೆ ಹೆಚ್ಚಿನ ಚರ್ಚೆಗಳ ಅಗತ್ಯವಿದೆ. ಪ್ರಾಸ್ಟ್ರೇಟ್ ಕ್ಯಾನ್ಸರ್, ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್ ಇದ್ದಂತೆ ಮುಕ್ತ ಚರ್ಚೆಗಳ ಹಾಗೂ ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಬೇಗ ಪತ್ತೆಯಾದರೆ ಮತ್ತು ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಕೊಡಿಸಿದರೆ ಪೂರ್ಣವಾಗಿ ಗುಣವಾಗುತ್ತದೆ.
ಪ್ರಾಸ್ಟ್ರೇಟ್ ಸಂಬಂ ಅಸಹಜ ಲಕ್ಷಣಗಳು ಬಹಳ ಪ್ರಧಾನವಾಗಿರುತ್ತವೆ. ಅವುಗಳನ್ನು ಯಾರೂ ಅಲಕ್ಷಿಸಬಾರದು. ಸಾಮಾನ್ಯವಾಗಿ ಪುರುಷರು ಇದರ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ. ಅರಿವಿನ ಕೊರತೆಯಿಂದ ಸಂಕೀರ್ಣತೆಗಳು ಹೆಚ್ಚುತ್ತವೆ ಮತ್ತು ಜೀವಕ್ಕೆ ಅಪಾಯವಾಗುತ್ತದೆ.

 

 ಪ್ರಾಸ್ಟ್ರೇಟ್ ಕ್ಯಾನ್ಸರ್ ಲಕ್ಷಣಗಳಲ್ಲಿ ಇವೂ ಇರುತ್ತವೆ: ಪದೇ ಪದೇ ಮೂತ್ರ ವಿಸರ್ಜನೆ, ವಿಶೇಷವಾಗಿ ರಾತ್ರಿಗಳಲ್ಲಿ ತಡೆ ತಡೆದು ಹೋಗುವುದು, ಮೂತ್ರದಲ್ಲಿ ರಕ್ತ. ಇವುಗಳನ್ನು ಅಲಕ್ಷಿಸದೆ ತಕ್ಷಣವೇ ವೈದ್ಯರನ್ನು ಕಾಣಬೇಕು. ಜತೆಗೆ ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸಬೇಕು. ಇದರಿಂದ ಪ್ರಾಸ್ಟ್ರೇಟ್ ಕ್ಯಾನ್ಸರ್ ಬೇಗ ಪತ್ತೆಯಾಗಲು ನೆರವಾಗುತ್ತದೆ. ವಯಸ್ಸು, ಕುಟುಂಬದ ಇತಿಹಾಸ ಇವುಗಳನ್ನು ಕೂಡ ಅಲಕ್ಷಿಸಬಾರದು. ಪ್ರಾಸ್ಟ್ರೇಟ್ ಕ್ಯಾನ್ಸರ್ ವಿಷಯದಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ.  ಜೀವನಶೈಲಿ ಮಾರ್ಪಾಡುಗಳೂ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಉತ್ತಮ ಆಹಾರ ಪದ್ಧತಿ, ಉತ್ತಮ ದೇಹ, ಆರೋಗ್ಯಕರ ಆಹಾರ ಇವೆಲ್ಲ ಪ್ರಾಸ್ಟ್ರೇಟ್ ಆರೋಗ್ಯಕ್ಕೆ ಬಹಳ ಮುಖ್ಯ. ಕ್ಯಾನ್ಸರ್ ವಿರುದ್ಧ ಹೋರಾಡುವ ಬಗ್ಗೆ ಅರಿವು ಬಹಳ ಮುಖ್ಯ. ಸಮಸೈ, ಸಂಕೀರ್ಣತೆಗಳು, ತಡೆಯುವುದು ಮತ್ತು ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಅರಿವಿದ್ದರೆ ಸುಲಭವಾಗುತ್ತದೆ. ಆದಷ್ಟು ಬೇಗ ಗುಣಪಡಿಸುವ ಚಿಕಿತ್ಸೆ ಹೆಚ್ಚು ಫಲಕಾರಿಯಾಗುತ್ತದೆ. 2001ರಲ್ಲಿ ಆಯುರ್ನಿರೀಕ್ಷೆ 61.97 ಇದ್ದುದು 2011ರಲ್ಲಿ 65.48ಕ್ಕೆ ಏರಿದೆ. ಆದರೆ, ವರ್ಷವರ್ಷವೂ ಪ್ರಾಸ್ಟ್ರೇಟ್ ಕ್ಯಾನ್ಸರ್ ಪ್ರಕರಣಗಳು ಶೇ.1ರಷ್ಟು ಹೆಚ್ಚುತ್ತಲೇ ಇವೆ. ಸರಿಯಾದ ಶಿಕ್ಷಣದ ಮೂಲಕ ಇದನ್ನು ತಡೆಯಬಹುದು ಮತ್ತು ಕಡಿಮೆ ಮಾಡಬಹುದು.

ಚಿಕಿತ್ಸೆಗಳು: ಶಸ್ತ್ರ ಚಿಕಿತ್ಸೆ, ರೇಡಿಯೇಷನ್ ಚಿಕಿತ್ಸೆ ಮತ್ತು ಔಷಧಗಳು ಹೀಗೆ ಹಲವಾರು ಬಗೆಯ ಚಿಕಿತ್ಸೆಗಳನ್ನು ಪ್ರಾಸ್ಟ್ರೇಟ್ ಕ್ಯಾನ್ಸರ್‌ಗೆ ಸೂಚಿಸಲಾಗುತ್ತದೆ. ಆಯ್ಕೆಯು ರೋಗದ ಹಂತದ ಮೇಲೆ ಅವಲಂಬಿಸಿರುತ್ತದೆ. ಬಿಪಿಎಚ್‌ಅನ್ನು ಔಷಧಗಳಿಂದ ಉಪಚರಿಸಬಹುದಾದರೂ ಸಂಕೀರ್ಣತೆಗಳಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಾಗಬಹುದು. ರೋಗಿ ಮತ್ತು ವೈದ್ಯರ ನಡುವೆ ಸಂವಹನೆ ಉತ್ತಮವಾಗಿರಬೇಕು. ವೈದ್ಯರ ಸಲಹೆ-ಸೂಚನೆಗಳು ಅಷ್ಟೇ ಮುಖ್ಯ. ಆಗಲೇ ಪ್ರಾಸ್ಟ್ರೇಟ್ ಕ್ಯಾನ್ಸರ್ ಗುಣವಾಗಲು ಸಾಧ್ಯ. ಪಿಎಸ್‌ಎ ತಪಾಸಣೆ ಮತ್ತು ಬಿಪಿಎಚ್ ಶಿಬಿರಗಳ ವ್ಯವಸ್ಥೆಯನ್ನು ಪ್ರೋತ್ಸಾಹಿಸಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin