ಪುಲಿ ಮುರುಗನ್ ರಿಮೇಕ್‍ನಲ್ಲಿ ಸಲ್ಲು ಘರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

puli-muragan

ಖ್ಯಾತ ಮಲೆಯಾಳಂ ನಟ ಮೋಹನ್ ಲಾಲ್ ಅಭಿನಯದ ಪುಲಿ ಮುರುಗನ್ ಭರ್ಜರಿ ಯಶಸ್ಸು ಗಳಿಸಿದೆ. 100 ಕೋಟಿ ಕ್ಲಬ್‍ಗೆ ಸೇರ್ಪಡೆಯಾದ ಮೊದಲ ಮೋಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಯೂ ಪಡೆದಿದೆ.ಈ ಸೂಪರ್‍ಹಿಟ್ ಚಿತ್ರ ಹಿಂದಿಯಲ್ಲಿ ನಿರ್ಮಾಣವಾದರೆ ಅದರಲ್ಲಿ ತಾನು ನಟಿಸುವ ಇರಾದೆಯನ್ನು ಸಲ್ಲು ವ್ಯಕ್ತಪಡಿಸಿದ್ದಾನೆ. ಮೊದಲು ನಾನು ಮೋಹನ್ ಲಾಲ್ ಅಭಿನಯದ ಪುಲಿ ಮುರುಗನ್ ಸಿನಿಮಾ ನೋಡುತ್ತೇನೆ. ನಂತರ ಬಾಡಿಗಾರ್ಡ್ ಸಿನಿಮಾ ನಿರ್ದೇಶಕ ಸಿದ್ದಿಖಿಗೆ ಈ ಸಿನಿಮಾ ನಿರ್ದೇಶಿಸುವ ಬಗ್ಗೆ ಹೇಳುತ್ತೇನೆ ಎಂದು ಹೇಳಿದ್ದಾನೆ. ಪ್ರಸ್ತುತ ಟ್ಯೂಬ್‍ಲೈಟ್ ಸಿನಿಮಾದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿರುವ ಎಸ್‍ಕೆಗೆ ಪುಲಿ ಮುರುಗನ್ ಸಿನಿಮಾ ನೋಡಲು ಸಮಯ ಲಭಿಸಿಲ್ಲ.



ಈ ಹಿಂದೆ ಸಲ್ಲು ನಟಿಸಿದ್ದ ಸೂಪರ್‍ಹಿಟ್ ಸಿನಿಮಾಗಳಾದ ಬಾಡಿಗಾರ್ಡ್ ಮತ್ತು ಕ್ಯೂಂ ಕೀ ಕೂಡ ಮಲೆಯಾಳಂ ಸಿನಿಮಾಗಳ ರಿಮೇಕ್ ಆಗಿದ್ದವು. ಈಗ ಪುಲಿ ಮುರುಗನ್ ಸಿನಿಮಾ ಬಗ್ಗೆ ಆತನಿಗೆ ವಿಶೇಷ ಒಲವು ಮೂಡಿದೆ. ಸಲ್ಲು ಅಭಿನಯದ ಟ್ಯೂಬ್‍ಲೈಟ್ ಸಿನಿಮಾ ದಾಖಲೆ ಸೃಷ್ಟಿಸಲಿದೆ ಎಂಬುದು ಬಾಲಿವುಡ್ ಮಂದಿಯ ಲೆಕ್ಕಾಚಾರ. ಇದು ದಂಗಲ್‍ನನ್ನು ಬೀಟ್ ಮಾಡಲಿದೆ ಎಂದೇ ಹೇಳಲಾಗುತ್ತಿದೆ. ಚೀನಿ ನಟಿ ಝು ಝು ನಟಿಸಿರುವ ಈ ಟ್ಯೂಬ್‍ಲೈಟ್ ಜೂನ್ 23ರಂದು ತೆರೆ ಕಾಣಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin