ಪುಸ್ತಕ ಮನೆಯಲ್ಲಿ  ಬಿಜಿಎಸ್ ವಿದ್ಯಾರ್ಥಿಗಳ ಜೋಡಣೆ ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

pandavapura

ಪಾಂಡವಪುರ, ಮಾ.28- ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಲಿಮ್ಕಾ ದಾಖಲೆಯ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಮನೆಗೆ ಮೈಸೂರಿನ ಬಿಜಿಎಸ್ ಬಿ.ಇಡಿ ಕಾಲೇಜಿನ ಮೊದಲನೆ ಮತ್ತು ಎರಡನೇ ವರ್ಷದ ಪ್ರಶಿಕ್ಷಣಾರ್ಥಿಗಳು ಭೇಟಿ ನೀಡಿ ಪುಸ್ತಕ ಜೋಡಣೆ ಕಾರ್ಯದಲ್ಲಿ ನೆರವಾದರು.200ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಸಂಜೆವರೆಗೆ ಪುಸ್ತಕ ಮನೆಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಪುಸ್ತಕಗಳನ್ನು ಜೋಡಣೆ ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜತೆಗೆ ಪುಸ್ತಕಗಳ ಅಧ್ಯಯನಕ್ಕೆ ಮೊರೆಹೋದರಲ್ಲದೇ, ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡರು. ಪ್ರಶಿಕ್ಷಣಾರ್ಥಿಗಳು ಪುಸ್ತಕ ಮನೆಯಲ್ಲಿದ್ದ 10ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹಣೆಯನ್ನು ಕಂಡು ಅಚ್ಚರಿಪಟ್ಟರು.

ಇದೇ ಸಂದರ್ಭದಲ್ಲಿ ಪ್ರಶಿಕ್ಷಾಣಾರ್ಥಿಗಳನ್ನು ತಾಲೂಕಿನ ಬಹುಮುಖ ಗ್ರಾಮೀಣ ಪ್ರತಿಭೆ ರೇವಂತ್ ರಾಜೀವ್ ಅವರ ಏಕಾಪಾತ್ರಭಿನಯ ನೆರದಿದ್ದವರನ್ನು ಮನಸೂರೆಗೊಂಡಿತು. ಅಲ್ಲದೇ ಪ್ರತಿಭೆ ಮೆಚ್ಚಿದ್ದ ಪುಸ್ತಕ ಪ್ರೇಮಿ ಅಂಕೇಗೌಡರು, ಬಾಲ್ಯದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ , ಕ್ರೀಡೆ, ನಾಣ್ಯ ಸಂಗ್ರಹದಲ್ಲಿ ತೊಡಗಿರುವ ಕುರಿತಂತೆ ಶ್ಲಾಘನೆ ವ್ಯಕ್ತಪಡಿಸಿದರಲ್ಲದೇ, ರೇವಂತ್ ರಾಜೀವ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.ಈ ವೇಳೆ ಅಂಕೇಗೌಡರ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿದ ಪ್ರಶಿಕ್ಷಣಾರ್ಥಿಗಳು, ಅಂಕೇಗೌಡ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಮೈಸೂರು ಬಿಜಿಎಸ್ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜು, ಉಪನ್ಯಾಸಕರಾದ ಬೆಟ್ಟಸ್ವಾಮಿಗೌಡ, ಕಸಾಪ ಜಿಲ್ಲಾ ಉಪಾಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ನಿವೃತ್ತ ಶಿಕ್ಷಕರಾದ ಚಿಕ್ಕಸಿದ್ದೇಗೌಡ, ಚಂದ್ರಶೇಖರಯ್ಯ, ಇಂಜನಿಯರ್ ಎಂ.ರಾಜೀವ್ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin